
ಗಜಕರ್ಣ ಅಂದರೆ ಹುಳುಕಡ್ಡಿ. ಇದು ಕೆಲವರಿಗೆ ಕೈಯಲ್ಲಿ, ಕುತ್ತಿಗೆಯಲ್ಲಿ ಹಾಗೆ ದೇಹದ ಹಲವು ಭಾಗಗಳಲ್ಲಿ ಕಾಣಿಸುತ್ತದೆ. ಇದನ್ನು ಪ್ರಾರಂಭದಲ್ಲೇ ವಾಸಿ ಮಾಡಬೇಕು. ಇಲ್ಲವಾದರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುತ್ತದೆ.
ಹುಳುಕಡ್ಡಿ ಸ್ವಲ್ಪವಿದ್ದರೆ ಅದಕ್ಕೆ ಬೆಳ್ಳುಳ್ಳಿ ರಸವನ್ನು ಹತ್ತಿಯಿಂದ ಹಚ್ಚಬೇಕು. ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದನ್ನು ದಿನಕ್ಕೆ 4 ರಿಂದ 5 ಬಾರಿ ಮಾಡಿದರೆ ಹುಳುಕಡ್ಡಿ ವಾಸಿಯಾಗುತ್ತದೆ. ಅದೇ ರೀತಿ ಅರಿಶಿನವನ್ನು ಹಚ್ಚಬಹುದು. ಉತ್ತಮ ಗುಣಮಟ್ಟದ ಶುದ್ದ ಅರಿಶಿನ ಬಳಕೆ ಕಡ್ಡಾಯ.
ಹುಳುಕಡ್ಡಿ ಹೆಚ್ಚಿದ್ದರೆ ಬೇವಿನ ಸೊಪ್ಪಿನ ಪೇಸ್ಟ್ ಗೆ ಒಂದು ಚಮಚ ಅರಿಶಿನ ಮತ್ತು ತುಳಸಿ ಪೇಸ್ಟ್ ಬೆರೆಸಿ ಹುಳುಕಡ್ಡಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಇದನ್ನು ಒಂದು ದಿನಕ್ಕೆ 3 ರಿಂದ 4 ಬಾರಿ ಮಾಡಿದರೆ ಹುಳುಕಡ್ಡಿ ಬೇಗನೆ ಕಡಿಮೆಯಾಗುತ್ತದೆ. ಇದರ ಕಲೆಯೂ ಉಳಿಯುವುದಿಲ್ಲ.