ಮಳೆಗಾಲದಲ್ಲಿ ಶೀತದೊಂದಿಗೆ ಗಂಟಲಿನ ನೋವು, ಊತ ಕೂಡಾ ಮಾಮೂಲು ಸಮಸ್ಯೆ. ಇವುಗಳಿಗೆ ಮನೆ ಮದ್ದುಗಳಿಂದಲೇ ಪರಿಹಾರ ಮಾಡಿ ವೈದ್ಯರಿಂದ ದೂರ ಉಳಿಯಬಹುದು. ಹೇಗೆನ್ನುತ್ತೀರಾ…?
ಗಂಟಲು ನೋವು ಬಂದಾಕ್ಷಣ ಬಿಸಿ ನೀರಿಗೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿ. ಬೆಳಿಗ್ಗೆ ಎದ್ದಾಕ್ಷಣ ಬೆಳ್ಳುಳ್ಳಿ ಜಜ್ಜಿ ಹಾಕಿದ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿದರೆ ಒಂದೇ ದಿನದಲ್ಲಿ ಗಂಟಲು ನೋವು ಮಾಯವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ದಿನದಲ್ಲಿ ನಾಲ್ಕಾರು ಬಾರಿ ಪ್ರಯತ್ನಿಸಿ.
ಗಂಟಲು ಊದಿಕೊಂಡಿದ್ದರೆ ಹೊರಭಾಗದಿಂದ ಸುಣ್ಣ ಹಾಗೂ ಬೆಲ್ಲ ಕಲಸಿ ತೆಳುವಾಗಿ ಹಚ್ಚಿ. ಇದು ತ್ವಚೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರದೆ ನಿಮ್ಮ ಗಂಟಲು ನೋವನ್ನು ಹೋಗಲಾಡಿಸುತ್ತದೆ. ಆದರೆ ಸುಣ್ಣ ಹಾಗೂ ಬೆಲ್ಲ ಸಮಪ್ರಮಾಣದಲ್ಲಿರಲಿ. ಸುಣ್ಣ ಹೆಚ್ವಾದರೆ ತ್ವಚೆ ಸುಟ್ಟು ಹೋಗಬಹುದು.
ಜೇನು ಮತ್ತು ಶುಂಠಿಯ ಮಿಶ್ರಣ ನಿಮ್ಮ ಸೋಂಕು ಹರಡುವ ವೈರಸ್ ವಿರುದ್ಧ ಹೋರಾಡಿ ಗಂಟಲಿನ ಬಾವನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪದಲ್ಲೂ ಪ್ರತಿರೋಧಕ ಶಕ್ತಿ ಇದೆ. ಹಾಗಾಗಿ ಇವೆರಡರ ಜೊತೆಯಾದ ಸೇವನೆ ನಿಮಗೆ ಗಂಟಲು ನೋವಿನಿಂದ ಮುಕ್ತಿ ಕೊಡುತ್ತದೆ.