alex Certify ಕೊರೆಯುವ ಚಳಿಯಲ್ಲಿ ರಾತ್ರಿ ಸಾಕ್ಸ್‌ ಧರಿಸಿ ಮಲಗುತ್ತೀರಾ…..? ಹಾಗಿದ್ದಲ್ಲಿ ಈ ತಪ್ಪನ್ನು ಮಾಡಬೇಡಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೆಯುವ ಚಳಿಯಲ್ಲಿ ರಾತ್ರಿ ಸಾಕ್ಸ್‌ ಧರಿಸಿ ಮಲಗುತ್ತೀರಾ…..? ಹಾಗಿದ್ದಲ್ಲಿ ಈ ತಪ್ಪನ್ನು ಮಾಡಬೇಡಿ…..!

ಈ ಭಾರಿ ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಚಳಿ ಬೀಳುತ್ತಿದೆ. ಉತ್ತರ ಭಾರತದಾದ್ಯಂತ ತಾಪಮಾನ ನಿರಂತರವಾಗಿ ಕುಸಿಯುತ್ತಿದೆ. ಚಳಿ ಮತ್ತು ಶೀತಗಾಳಿ  ಜನರನ್ನು ಕಂಗಾಲಾಗಿಸಿದೆ. ಗುಡ್ಡಗಾಡು ಪ್ರದೇಶಗಳಲ್ಲಂತೂ ಮಳೆ ಮತ್ತು ಹಿಮಪಾತ ಜನರನ್ನು ಸಂಕಷ್ಟಕ್ಕೆ ದೂಡಿದೆ. ಭಯಾನಕ ಚಳಿಯಿಂದ ಪಾರಾಗಲು ಜನರು ಹರಸಾಹಸ ಮಾಡ್ತಿದ್ದಾರೆ. ಉಣ್ಣೆಯ ಬಟ್ಟೆಗಳು, ಟೋಪಿ ಇವನ್ನೆಲ್ಲ ಧರಿಸಿದ್ರೂ ಚಳಿ ಕಡಿಮೆಯಾಗದೇ ಇದ್ದಾಗ ರಾತ್ರಿ ವೇಳೆ ಕಾಲು ಬೆಚ್ಚಗಾಗಲು ಕೆಲವರು ಸಾಕ್ಸ್ ಹಾಕಿಕೊಂಡು ಮಲಗುತ್ತಾರೆ.

ಆದರೆ ಸಾಕ್ಸ್ ಧರಿಸಿ ಮಲಗುವುದು ಸರಿಯೇ? ಇದು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು? ಅದರ ಅಡ್ಡ ಪರಿಣಾಮಗಳು ಏನಾಗಬಹುದು ಎಂಬುದನ್ನೆಲ್ಲ ನೋಡೋಣ. ಚಳಿಗಾಲದಲ್ಲಿ ಸಾಕ್ಸ್ ಧರಿಸುವುದು ತಪ್ಪಲ್ಲ. ನಿಮಗೆ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಿಲ್ಲದೇ ಇದ್ದರೆ ಚಳಿಯಿಂದ ಪಾದಗಳನ್ನು ರಕ್ಷಿಸಿಕೊಳ್ಳಲು ಸಾಕ್ಸ್‌ ಧರಿಸಬಹದು. ಚಳಿಗಾಲದುದ್ದಕ್ಕೂ ಇದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.  ಚಳಿಯಲ್ಲಿ ಪಾದಗಳು ಬೇಗನೆ ತಣ್ಣಗಾಗುತ್ತವೆ. ಶೀತದಿಂದಾಗಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಇದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ.

ಅಂತಹ ಪರಿಸ್ಥಿತಿಯಲ್ಲಿ ಸಾಕ್ಸ್ ಧರಿಸಿದರೆ ಆರಾಮವಾಗಿ ಮಲಗಬಹುದು. ಚಳಿಗಾಲದಲ್ಲಿ ಹಿಮ್ಮಡಿಗಳಲ್ಲಿ ಬಿರುಕು ಉಂಟಾಗುತ್ತದೆ. ಸಾಕ್ಸ್ ಧರಿಸುವುದರಿಂದ ಈ ಸಮಸ್ಯೆಯೂ ಪರಿಹಾರವಾಗುತ್ತದೆ. ರಾತ್ರಿಯಲ್ಲಿ ಸಾಕ್ಸ್ ಧರಿಸಿ ಮಲಗುವುದರಿಂದ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ. ನೀವು ಧರಿಸುವ ಸ್ಟಾಕಿಂಗ್ ಅಥವಾ ಸಾಕ್ಸ್‌ ಹತ್ತಿಯಿಂದ ಮಾಡಿದ್ದಾಗಿರಬೇಕು  ಮತ್ತು ಸ್ವಚ್ಛವಾಗಿರಬೇಕು. ಸಾಕ್ಸ್ ಸಿಂಥೆಟಿಕ್ ಆಗಿರಬಾರದು ಎಂಬುದು ಸಹ ನಿಮ್ಮ ಗಮನದಲ್ಲಿರಲಿ. ಅಕಸ್ಮಾತ್‌ ಅದು ಹತ್ತಿಯ ಸಾಕ್ಸ್‌ ಅಲ್ಲದೇ ಹೋದಲ್ಲಿ ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಕೆಲವೊಮ್ಮೆ ಬಿಗಿಯಾದ ಸಾಕ್ಸ್ ಧರಿಸುವುದರಿಂದ ರಕ್ತ ಪರಿಚಲನೆ ಮೇಲೆ ಪರಿಣಾಮ ಬೀರುತ್ತದೆ. ಪಾದಗಳಲ್ಲಿ, ಬೆರಳುಗಳಲ್ಲಿ ಗಾಯವಾಗಿದ್ದರೆ, ಸಾಕ್ಸ್ ಧರಿಸಿ ಮಲಗುವುದರಿಂದ ತೊಂದರೆಯಾಗಬಹುದು. ಸಾಕ್ಸ್ ಧರಿಸಿದಾಗ ಗಾಳಿಯಾಡದೇ ಇರುವುದರಿಂದ ಗಾಯದಲ್ಲಿ ಸೋಂಕು ಉಂಟಾಗಬಹುದು. ಗಾಯ ಬೇಗನೆ ಒಣಗುವುದೂ ಇಲ್ಲ. ಚಳಿಗಾಲದಲ್ಲಿ ಸಾಕ್ಸ್‌ ಧರಿಸಿ ಮಲಗುವುದರಿಂದ ಕೆಲವು ಉಪಯೋಗಗಳ ಜೊತೆಗೆ ಅನಾನುಕೂಲಗಳೂ ಇವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...