ಟ್ಯಾಟೂ ಹಾಕಿಸಿಕೊಳ್ಳುವುದು ಈಗ ಫ್ಯಾಷನ್. ಈ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ಹಚ್ಚೆ ಹಾಕುವ ಈ ಕಲೆ ಶತಮಾನಗಳಿಂದಲೂ ಇದೆ. ಆದರೆ ಈಗ ಬೆನ್ನು, ಕೈ, ಕಾಲು, ಸೊಂಟ ಹೀಗೆ ಎಲ್ಲೆಂದರಲ್ಲಿ ಟ್ಯಾಟೂ ಹಾಕಿಸಿಕೊಳ್ತಾರೆ.
ಕೆಲವು ಸಮಯದಿಂದ ಕೈಬೆರಳುಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಟ್ರೆಂಡ್ ಕೂಡ ಶುರುವಾಗಿದೆ. ಬೆರಳಿನ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಇದರಲ್ಲಿ ಸಾಕಷ್ಟು ಎಚ್ಚರಿಕೆಯ ಅಗತ್ಯವಿದೆ. ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ ನಷ್ಟ ಸಂಭವಿಸಬಹುದು.
ಸಂಶೋಧನೆ ಅಗತ್ಯ – ಬೆರಳಿನ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೊದಲು ಸ್ವಲ್ಪ ರಿಸರ್ಚ್ ಮಾಡಿಕೊಳ್ಳು. ಏಕೆಂದರೆ ಇದು ದೇಹದ ಸೂಕ್ಷ್ಮ ಪ್ರದೇಶವಾಗಿದೆ. ಆದ್ದರಿಂದ ಚರ್ಮಕ್ಕೆ ಹಾನಿಯಾಗುತ್ತದೆಯೇ ಎಂದು ಮೊದಲು ಚರ್ಮ ತಜ್ಞರನ್ನು ಕೇಳಿ. ಹಚ್ಚೆ ಹಾಕಿದ ನಂತರ ಬೆರಳುಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಕೂಡ ಪರಿಶೀಲಿಸಿ.
ನೋವು – ಬೆರಳುಗಳ ಬಳಿ ಇರುವ ಚರ್ಮವು ಸೂಕ್ಷ್ಮ ಮತ್ತು ತೆಳ್ಳಗಿರುತ್ತದೆ. ದೇಹದ ಇತರ ಭಾಗಗಳಿಗಿಂತಲೂ ಬೆರಳಿನ ಮೇಲೆ ಹಚ್ಚೆ ಹಾಕಿದಾಗ ಹೆಚ್ಚು ನೋವಾಗುತ್ತದೆ. ಚರ್ಮ ಅಥವಾ ಮೂಳೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಿ.
ಸರಳ ವಿನ್ಯಾಸ – ಬೆರಳಿನ ಮೇಲ್ಮೈ ವಿಸ್ತೀರ್ಣವು ತುಂಬಾ ಕಡಿಮೆಯಾಗಿದೆ. ಆದ್ದರಿಂದ ಪ್ರಯೋಗಕ್ಕೆ ಹೆಚ್ಚಿನ ಅವಕಾಶವಿಲ್ಲ. ಸರಳವಾದ ವಿನ್ಯಾಸವನ್ನು ಆಯ್ಕೆ ಮಾಡಿ ಮತ್ತು ಅದನ್ನು ನುರಿತ ಕಲಾವಿದರಿಂದಲೇ ಹಾಕಿಸಿಕೊಳ್ಳಿ.
ಹಚ್ಚೆ ಮರೆಯಾಗುವ ಭಯ – ನಮ್ಮ ದೇಹದ ಇತರ ಭಾಗಗಳಿಗಿಂತ ಬೆರಳುಗಳಲ್ಲಿ ಹೆಚ್ಚು ಘರ್ಷಣೆ ಇರುತ್ತದೆ. ಏಕೆಂದರೆ ನಾವು ದೈನಂದಿನ ಜೀವನದ ಎಲ್ಲಾ ಕೆಲಸಗಳನ್ನು ಕೈಗಳ ಸಹಾಯದಿಂದ ಮಾಡುತ್ತೇವೆ. ಇದಲ್ಲದೆ, ನಾವು ದಿನಕ್ಕೆ ಹಲವಾರು ಬಾರಿ ನಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯುತ್ತೇವೆ. ಆದ್ದರಿಂದ ಬೆರಳುಗಳ ಮೇಲೆ ಹಾಕಿದ ಹಚ್ಚೆ ಬೇಗನೆ ಮರೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಕೆಲವರು ಕಾಲಕಾಲಕ್ಕೆ ಟಚ್ ಅಪ್ ಮಾಡುತ್ತಲೇ ಇರುತ್ತಾರೆ.