ಕೇವಲ 18 ದಿನಗಳಲ್ಲಿ ಮಾರಾಟವಾದ ‘ಬಿಯರ್’ ಮೌಲ್ಯ ಕೇಳಿದ್ರೆ ದಂಗಾಗ್ತೀರಾ…..!

ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಳನೀರು ಸೇರಿದಂತೆ ತಂಪು ಪಾನೀಯಗಳಿಗೆ ಅತಿ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ತೆಲಂಗಾಣದಲ್ಲಿ ಮೇ ತಿಂಗಳ ಕೇವಲ 18 ದಿನಗಳಲ್ಲಿ ಮಾರಾಟವಾಗಿರುವ ಬಿಯರ್ ಮೌಲ್ಯ ದಂಗಾಗಿಸುವಂತಿದೆ.

ಹೌದು, ಮೇ 1ರಿಂದ 18ರವರೆಗೆ ತೆಲಂಗಾಣದಲ್ಲಿ ಬರೋಬ್ಬರಿ 582.99 ಕೋಟಿ ರೂಪಾಯಿ ಮೌಲ್ಯದ 4.23 ಕೋಟಿ ಬಿಯರ್ ಬಾಟಲ್ ಗಳು ಮಾರಾಟವಾಗಿದ್ದು, ಮೇ ತಿಂಗಳು ಕೊನೆಗೊಳ್ಳುವ ವೇಳೆಗೆ ಇದರ ಮಾರಾಟ ಒಂದು ಸಾವಿರ ಕೋಟಿ ರೂಪಾಯಿ ತಲುಪಬಹುದು ಎಂಬ ಲೆಕ್ಕಾಚಾರವನ್ನು ಅಧಿಕಾರಿಗಳು ಇಟ್ಟುಕೊಂಡಿದ್ದಾರೆ.

18 ದಿನಗಳ ಅವಧಿಯಲ್ಲಿ 19 ಡಿಪೋಗಳಿಂದ 35,25,247 ಕಾರ್ಟನ್ ಗಳಷ್ಟು ಬಿಯರ್ ಮಾರಾಟವಾಗಿದ್ದು, ಪ್ರತಿನಿತ್ಯ 1,95,847 ಬಿಯರ್ ಕ್ಯಾನ್ ಗಳು ಹಾಗೂ 23,50,164 ಬಿಯರ್ ಬಾಟಲಿಗಳು ಮಾರಾಟವಾದಂತಾಗಿದೆ. ಈ ಪೈಕಿ ನಲಗೊಂಡ ಜಿಲ್ಲೆಯಲ್ಲಿ 18 ದಿನದ ಅವಧಿಯಲ್ಲಿ ಅತಿ ಹೆಚ್ಚು ಅಂದರೆ 48.14 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆದಿದ್ದು, ನಂತರದ ಸ್ಥಾನದಲ್ಲಿ ಕರೀಮ್ ನಗರ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read