ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದಿದೆ. ಕೇಂದ್ರ ಸರ್ಕಾರ ಗೃಹ ನಿರ್ಮಾಣ ಸಾಲದ ಮೇಲಿನ ಬಡ್ಡಿ ದರವನ್ನು ಶೇ.7.9ರಿಂದ ಶೇ.7.1ಕ್ಕೆ ಇಳಿಸಿದೆ.
ಹೌದು, ಕೇಂದ್ರ ಸರ್ಕಾರಿ ನೌಕರರು ಏಪ್ರಿಲ್ 1, 2022ರಿಂದ, ಮಾರ್ಚ್ 2023 ರವರೆಗೆ ಶೇ.7.10 ಕಡಿಮೆ ಬಡ್ಡಿ ದರದಲ್ಲಿ ಹೌಸ್ ಬಿಲ್ಡಿಂಗ್ ಅಡ್ವಾನ್ಸ್‌ನ ಲಾಭವನ್ನು ಪಡೆಯಬಹುದಾಗಿದೆ. 2022-23 ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗೆ ವಸತಿ ನಿರ್ಮಾಣದ ಮುಂಗಡ ಬಡ್ಡಿ ದರವು ಶೇ. 7.1 ಆಗಿರುತ್ತದೆ. ಮಾರ್ಚ್ 2022 ರವರೆಗೆ ಕೇಂದ್ರ ಸರ್ಕಾರಿ ನೌಕರರು ವಾರ್ಷಿಕ ಶೇ.7.90 ದರದಲ್ಲಿ ಮನೆ ನಿರ್ಮಾಣ ಮುಂಗಡವನ್ನು ಪಡೆಯುತ್ತಿದ್ದರು. ಈಗ ಅದನ್ನು ಮತ್ತಷ್ಟು ಕಡಿಮೆ ಮಾಡಲಾಗಿದೆ.
ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಮನೆ ನಿರ್ಮಾಣಕ್ಕಾಗಿ ಮುಂಗಡ ಹಣವನ್ನು ನೀಡುತ್ತದೆ. ಇದರಲ್ಲಿ ಉದ್ಯೋಗಿ ಸ್ವಂತ ಅಥವಾ ಪತ್ನಿಯ ನಿವೇಶನದಲ್ಲಿ ಮನೆ ಕಟ್ಟಲು ಮುಂಗಡ ಹಣ ತೆಗೆದುಕೊಳ್ಳಬಹುದು. ಈ ಯೋಜನೆಯನ್ನು 1 ಅಕ್ಟೋಬರ್ 2020 ರಿಂದ ಪ್ರಾರಂಭಿಸಲಾಯಿತು.