ಕುಟುಂಬ ಸದಸ್ಯರ ಮಧ್ಯೆ ಪರಸ್ಪರ ಪ್ರೀತಿ ಚಿಗುರಲು ಬೇಕು ಈ ವಸ್ತು

ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆ ಹಾಗೂ ಮನಸ್ಸನ್ನು ಶಾಂತವಾಗಿಡುತ್ತವೆ. ಶುಭ ವಸ್ತುಗಳ ಪಟ್ಟಿಯಲ್ಲಿ ಬರುವಂತ ಒಂದು ವಸ್ತು ಜೇನುತುಪ್ಪ.

ಜೇನುತುಪ್ಪದ ಸಕಾರಾತ್ಮಕ ಶಕ್ತಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದ್ರಿಂದ ಕುಟುಂಬದ ಸದಸ್ಯರಿಗೆ ಲಾಭವಾಗುತ್ತದೆ. ಹಾಗಾಗಿ ಅನೇಕರ ಮನೆಯಲ್ಲಿ ಜೇನುತುಪ್ಪವನ್ನು ಇಟ್ಟಿರುತ್ತಾರೆ.

ಜೇನು ತುಪ್ಪವನ್ನು ಮನೆಯ ಸ್ವಚ್ಛ ಹಾಗೂ ಸೂಕ್ತ ಜಾಗದಲ್ಲಿ ಇಡಬೇಕು. ಇದು ಮನೆಯಲ್ಲಿ ಶಾಂತಿ ಜೊತೆಗೆ ಹಣ ವ್ಯಯವಾಗೋದನ್ನು ತಪ್ಪಿಸುತ್ತದೆ. ಜಾತಕದಲ್ಲಿ ಶನಿ ಕೆಳ ಸ್ಥಾನದಲ್ಲಿದ್ದರೆ ಅಥವಾ ವಕ್ರವಾಗಿದ್ದರೆ ಇಲ್ಲ ಅಶುಭ ಸ್ಥಾನದಲ್ಲಿದ್ದರೆ ಶನಿಯಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶನಿವಾರ ಕಾಲಭೈರವ ಹಾಗೂ ಶನಿಯ ಪೂಜೆ ಮಾಡಬೇಕು. ಇಡಿ ಉದ್ದಿನ ಜೊತೆ ಮೊಸರು ಹಾಗೂ ಜೇನು ತುಪ್ಪವನ್ನು ಬೆರೆಸಿ ದೇವರಿಗೆ ಅರ್ಪಿಸಬೇಕು. ಇದ್ರಿಂದ ಕುಟುಂಬದಲ್ಲಿ ಅಶಾಂತಿ ಹಾಗೂ ಸಂತಾನ ಸಮಸ್ಯೆಗೂ ಪರಿಹಾರ ಸಿಗಲಿದೆ. ಸಂತಾನ ಸಮಸ್ಯೆ ಜೊತೆಗೆ ಮಕ್ಕಳ ವ್ಯವಹಾರದ ಬಗ್ಗೆ ಪಾಲಕರು ಚಿಂತಿತರಾಗಿದ್ದಲ್ಲಿ ಈ ಉಪಾಯ ಫಲ ನೀಡಲಿದೆ.

ದೈನಂದಿನ ಜೀವನದಲ್ಲಿ ಕುಟುಂಬದ ಪ್ರತಿಯೊಬ್ಬ ವ್ಯಕ್ತಿ ಜೇನುತುಪ್ಪವನ್ನು ಬಳಕೆ ಮಾಡಿದ್ರೆ ಆಂತರಿಕ ಸಂಘರ್ಷ ನಿಧಾನವಾಗಿ ಕಡಿಮೆಯಾಗಲಿದೆ. ಮನಸ್ಸು ಶಾಂತವಾಗುವ ಜೊತೆಗೆ ಪರಸ್ಪರ ಪ್ರೀತಿ ಚಿಗುರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read