ಮನೆಯ ಗೋಡೆಗಳ ಮೇಲೆ ಹಲವು ಬಗೆಯ ಫೋಟೊಗಳನ್ನು ಹಾಕುತ್ತೇವೆ. ಹಾಗೇ ಮನೆಯ ಸದಸ್ಯರೆಲ್ಲಾ ಸೇರಿ ಫೋಟೊ ತೆಗೆದು ಅದನ್ನು ಮನೆಯಲ್ಲಿ ಗೋಡೆಗೆ ನೇತು ಹಾಕುತ್ತಾರೆ. ಆದರೆ ಇದನ್ನು ಸರಿಯಾಗಿ ಹಾಕಿದರೆ ಮಾತ್ರ ಆ ಮನೆಯ ಸದಸ್ಯರಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸದಸ್ಯರು ಒಟ್ಟಿಗೆ ಇರುವ ಫೋಟೊಗಳನ್ನು ನೇತು ಹಾಕುವುದು ಉತ್ತಮ. ಇದು ಮನೆಯ ಸದಸ್ಯರಲ್ಲಿ ಸಂತೋಷವನ್ನು ಮೂಡಿಸುತ್ತದೆ. ಸದಸ್ಯರೊಳಗಿನ ಬಾಂಧವ್ಯವನ್ನು ಇನ್ನು ಹೆಚ್ಚಾಗುವಂತೆ ಮಾಡುತ್ತದೆ.
ಆದರೆ ಈ ಫೋಟೊಗಳನ್ನು ಎಲ್ಲೆಂದರಲ್ಲಿ ಹಾಕಬಾರದು. ಇದರಿಂದ ಸದಸ್ಯರ ಮಧ್ಯ ವೈಮನಸ್ಸು ಮೂಡಿ ಅವರ ಬಾಂಧವ್ಯ ಹಾಳಾಗುತ್ತದೆ. ಹಾಗಾಗಿ ಸದಸ್ಯರ ಗ್ರೂಪ್ ಫೋಟೊವನ್ನು ನೈರುತ್ಯ ದಿಕ್ಕಿನಲ್ಲಿ ಇಡಿ. ಇದು ಮನೆಯವರಲ್ಲಿ ಸಕರಾತ್ಮಕ ಭಾವನೆಯನ್ನು ಉಂಟುಮಾಡುತ್ತದೆ.