ಕಾರು, ಬಂಗಲೆ, ಹಣ ಯಾವುದೂ ಅಲ್ಲ, ಮಹಿಳೆ ತನ್ನ ಸಂಗಾತಿಯಿಂದ ಬಯಸುವುದು ಇಷ್ಟೇ….!

ಮಹಿಳೆಯ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಏಕೆಂದರೆ ಮಹಿಳೆಯರಿಗೆ ಮೂಡ್‌ ಸ್ವಿಂಗ್‌ ಜಾಸ್ತಿ. ಮನಸ್ಸು ಬದಲಾಗುತ್ತಲೇ ಇರುತ್ತದೆ. ಹಾಗಾಗಿ ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ದುಡ್ಡಿದ್ದರೆ ಸಾಕು ಯುವತಿಯನ್ನು ಆಕರ್ಷಿಸಬಹುದು ಎಂದು ಪುರುಷರು ಭಾವಿಸುತ್ತಾರೆ. ಆದರೆ ಇದು ತಪ್ಪು. ಯಾಕೆಂದರೆ ಅನೇಕ ಹೆಣ್ಣು ಮಕ್ಕಳು ಪ್ರೀತಿಗಾಗಿ ಬಂಗಲೆ, ಕಾರು, ಹಣ, ಸಂಪತ್ತು ಎಲ್ಲವನ್ನೂ ಬಿಟ್ಟು ಹೋಗಿರುವ ಅನೇಕ ಉದಾಹರಣೆಗಳಿವೆ. ಹೆಣ್ಣು ತನ್ನ ಪುರುಷ ಸಂಗಾತಿಯಿಂದ ಬಯಸುವ 4 ವಿಷಯಗಳು ಯಾವುವು ಎಂದು ತಿಳಿಯೋಣ.

ಸಂಬಂಧದಲ್ಲಿ ಸುಳ್ಳಿಗೆ ಸ್ಥಾನವಿಲ್ಲ

ಯಾವುದೇ ಸಂಬಂಧದ ಅಡಿಪಾಯ ಸತ್ಯ ಮತ್ತು ನಂಬಿಕೆಯ ಮೇಲೆ ನಿಂತಿದೆ. ಅದರಲ್ಲಿ ಸುಳ್ಳಿನ ಪ್ರವೇಶವಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿಯು ಎಂದಿಗೂ ಮೋಸ ಮಾಡಬಾರದು ಮತ್ತು ಜೀವನದುದ್ದಕ್ಕೂ ಸತ್ಯದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತಾಳೆ.

ವಿಶೇಷ ಭಾವನೆ ಮೂಡಿಸಿ

ಸಂಗಾತಿಯ ಮನಸ್ಸಿನಲ್ಲಿ ತನಗೆ ವಿಶೇಷ ಸ್ಥಾನವಿದೆ ಎಂದು ಆಕೆ ಭಾವಿಸುತ್ತಾಳೆ. ತನನ್ನು ಸಂಗಾತಿ ಹೊಗಳಬೇಕು, ಪ್ರಶಂಸಿಸಬೇಕೆಂಬ ಆಸೆ ಅವಳಲ್ಲಿರುತ್ತದೆ. ಹಾಗಾಗಿ ಆಕೆಯ ನಿರೀಕ್ಷೆಗೆ ತಕ್ಕಂತೆ ಹೊಸದೇನನ್ನಾದರೂ ಮಾಡಿ, ಸರ್‌ಪ್ರೈಸ್‌ ಕೊಡುತ್ತಿರಿ.

ಅವಳನ್ನು ಬೆಂಬಲಿಸಿ

ಮಹಿಳೆಯರು ತಮ್ಮ ಸಂಗಾತಿಯಿಂದ ಪ್ರೀತಿಯನ್ನು ಬಯಸುತ್ತಾರೆ. ಆದರೆ ಗೌರವವಿಲ್ಲದೆ ಪ್ರೀತಿ ಅಪೂರ್ಣ. ಕಷ್ಟದ ಸಂದರ್ಭದಲ್ಲೂ ಜೀವನ ಸಂಗಾತಿ ತನಗೆ ಆಸರೆಯಾಗಬೇಕು, ಎಷ್ಟೇ ತೊಂದರೆ ಬಂದರೂ ಪ್ರೀತಿಗೆ ಕೊರತೆ ಇರಬಾರದೆಂದು ಬಯಸುತ್ತಾರೆ.

ಗುಣಮಟ್ಟದ ಸಮಯವನ್ನು ಕಳೆಯಿರಿ

ರಿಲೇಶನ್‌ಶಿಪ್‌ನಲ್ಲಿದ್ದಾಗ ಹುಡುಗರ ವೃತ್ತಿ ಜೀವನದ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲಸದ ಒತ್ತಡ ಹೆಚ್ಚಾದಂತೆಲ್ಲ ಸಮಯವೇ ಸಿಗುವುದಿಲ್ಲ. ವಾರಾಂತ್ಯದ ರಜೆಯಲ್ಲಾದರೂ ಪತ್ನಿ ಅಥವಾ ಗೆಳತಿಯೊಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಹ್ಯಾಂಗ್ ಔಟ್ ಮಾಡಲು ಯಾವುದೇ ಯೋಜನೆ ಇಲ್ಲದಿದ್ದರೆ, ಮನೆಯಲ್ಲಿ ಒಟ್ಟಿಗೆ ರಾತ್ರಿಯ ಊಟ ಮಾಡಿ, ಚಲನಚಿತ್ರ ವೀಕ್ಷಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read