alex Certify ಔಷಧಗಳು ಏಕೆ ಬಣ್ಣ ಬಣ್ಣವಾಗಿರುತ್ತವೆ…..? ಮಾತ್ರೆಗಳ ಕಲರ್‌ಗೂ ಕಾಯಿಲೆಗೂ ಸಂಭಂಧವಿದೆಯೇ….? ಇಲ್ಲಿದೆ ಕುತೂಹಲಕಾರಿ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔಷಧಗಳು ಏಕೆ ಬಣ್ಣ ಬಣ್ಣವಾಗಿರುತ್ತವೆ…..? ಮಾತ್ರೆಗಳ ಕಲರ್‌ಗೂ ಕಾಯಿಲೆಗೂ ಸಂಭಂಧವಿದೆಯೇ….? ಇಲ್ಲಿದೆ ಕುತೂಹಲಕಾರಿ ಸಂಗತಿ

ನಾವು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರು ವಿವಿಧ ಬಣ್ಣಗಳ ಔಷಧಿ, ಮಾತ್ರೆಗಳನ್ನು ನೀಡ್ತಾರೆ. ಎಲ್ಲಾ ಔಷಧಗಳ ಬಣ್ಣ ಬಿಳಿ, ಅಥವಾ ಕಪ್ಪಗಿರುವುದಿಲ್ಲ. ಒಂದೊಂದು ಔಷಧಿಯ ಬಣ್ಣ ಒಂದೊಂದು ತೆರನಾಗಿರುತ್ತದೆ. ಈ ಔಷಧಿಗಳ ಬಣ್ಣಕ್ಕೂ ಕಾಯಿಲೆಗೂ ಯಾವುದೇ ಸಂಬಂಧವಿದೆಯೇ? ಅಥವಾ ಔಷಧಿಗಳನ್ನು ಆಕರ್ಷಕವಾಗಿಸಲು ಈ ರೀತಿ ಕಲರ್‌ಫುಲ್‌ ಮಾಡಲಾಗಿದೆಯೇ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಔಷಧಿಗಳ ಬಣ್ಣಕ್ಕೆ ಸಂಬಂಧಿಸಿದ ರಹಸ್ಯವನ್ನು ತಿಳಿದುಕೊಳ್ಳೋಣ.

ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳು

ಮಾನವ ಕಾಲಕ್ಕೆ ತಕ್ಕಂತೆ ಅನೇಕ ವಿಧದ ಗಿಡಮೂಲಿಕೆಗಳು ಮತ್ತು ಔಷಧಿಗಳನ್ನು ಕಂಡುಹಿಡಿದನು. ಆ ಸಮಯದಲ್ಲಿ  ಔಷಧಿಗಳು, ಮಾತ್ರೆ ಮತ್ತು ಕ್ಯಾಪ್ಸುಲ್ಗಳ ರೂಪದಲ್ಲಿ ಇರಲಿಲ್ಲ,  ಸಸ್ಯಗಳ ರೂಪದಲ್ಲಿದ್ದವು. ನಂತರ ಆ ಗಿಡಗಳ ರಸವನ್ನು ತೆಗೆದು, ಪುಡಿಯಾಗಿ ಪರಿವರ್ತಿಸಿ ಮಾತ್ರೆಗಳನ್ನು ತಯಾರಿಸುತ್ತಿದ್ದರು. ಈಜಿಪ್ಟಿನ ನಾಗರಿಕತೆಯ ಸಮಯದಲ್ಲಿ ಔಷಧಿಗಳನ್ನು ಮೊದಲು ಮಾತ್ರೆಗಳ ರೂಪದಲ್ಲಿ ಬಳಸಲಾಗುತ್ತಿತ್ತು ಎಂದು ನಂಬಲಾಗಿದೆ. ಆ ಸಮಯದಲ್ಲಿ ಔಷಧಿಗಳನ್ನು ಮಣ್ಣಿನಲ್ಲಿ ಅಥವಾ ಬ್ರೆಡ್‌ನಲ್ಲಿ ಬೆರೆಸಿ ತಯಾರಿಸಲಾಗುತ್ತಿತ್ತು. ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿ ಪ್ರಾರಂಭವಾದ ನಂತರ 1960ರ ಸುಮಾರಿಗೆ ಬಿಳಿ ಮಾತ್ರೆಗಳನ್ನು ತಯಾರಿಸಲು ಪ್ರಾರಂಭಿಸಲಾಯಿತು. ನಂತರ ಉನ್ನತ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಔಷಧಿಗಳ ತಯಾರಿಕೆಯಲ್ಲಿಯೂ ಬದಲಾವಣೆಯಾಯ್ತು. 1975ರ ಸುಮಾರಿಗೆ ವರ್ಣರಂಜಿತ ಕ್ಯಾಪ್ಸುಲ್‌ಗಳು ಸಿದ್ಧವಾದವು. ಔಷಧಿಗಳಿಗೆ ವಿವಿಧ ಬಣ್ಣಗಳನ್ನು ಸೇರಿಸಲಾಯಿತು. ಈಗ ಮೆಡಿಕಲ್ ಸ್ಟೋರ್ ನಲ್ಲಿ ನೋಡಿದರೆ ವಿವಿಧ ಬಣ್ಣಗಳಲ್ಲಿ ಔಷಧಗಳು ಮಾರಾಟವಾಗುತ್ತವೆ.

ಬಣ್ಣಬಣ್ಣದ ಔಷಧಗಳನ್ನು ಏಕೆ ತಯಾರಿಸಲಾಗುತ್ತದೆ?

ಈಗ 75000ಕ್ಕೂ ಹೆಚ್ಚು ಬಣ್ಣ ಸಂಯೋಜನೆಗಳನ್ನು ಔಷಧಿ ಮತ್ತು ಮಾತ್ರೆಗಳ ತಯಾರಿಕೆಗೆ ಬಳಸಲಾಗುತ್ತದೆ. ಮಾತ್ರೆಗಳಿಗೆ ಲೇಪನಕ್ಕಾಗಿ ವಿವಿಧ ಬಣ್ಣಗಳನ್ನು ಸಹ ಬಳಸಲಾಗುತ್ತದೆ. ಔಷಧಿಗಳ ಹೆಸರನ್ನು ಓದುವ ಮೂಲಕ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗದವರು, ಅವುಗಳ ಬಣ್ಣವನ್ನು ನೋಡುವ ಮೂಲಕ ಔಷಧಿಗಳ ನಡುವೆ ಸುಲಭವಾಗಿ ವ್ಯತ್ಯಾಸವನ್ನು ಗುರುತಿಸಬಹುದು. ಈ ಕಾರಣಕ್ಕೆ ಬಣ್ಣಬಣ್ಣದ ಔಷಧಗಳನ್ನು ತಯಾರಿಸಲಾಗುತ್ತದೆ.

ಔಷಧಿಗಳ ಬಣ್ಣಕ್ಕೂ ರೋಗಕ್ಕೂ ಇದೆ ಸಂಬಂಧ!

ಅಮೇರಿಕಾದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಔಷಧಿಗಳ ಬಣ್ಣವು ರೋಗವನ್ನು ಆಧರಿಸಿದೆ. ಕಡಿಮೆ ಪರಿಣಾಮಕಾರಿ ಔಷಧಗಳನ್ನು ನೀಡಬೇಕಾದ ರೋಗಗಳು, ಅವುಗಳ ಬಣ್ಣವನ್ನು ಹಗುರವಾಗಿ ಇರಿಸಲಾಗುತ್ತದೆ. ಮತ್ತೊಂದೆಡೆ ತಕ್ಷಣದ ಪರಿಣಾಮಕ್ಕಾಗಿ ಮಾಡಿದ ಔಷಧಗಳು ಕಡುವಾದ ಬಣ್ಣ ಹೊಂದಿರುತ್ತವೆ. ಇಷ್ಟೇ ಅಲ್ಲ ವಾಸನೆ ಮತ್ತು ರುಚಿಯ ಆಧಾರದ ಮೇಲೆ ಔಷಧಿಗಳ ಬಣ್ಣವನ್ನು ಸಹ ನಿರ್ಧರಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...