ಪಿಜ್ಜಾ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಓವನ್ ಇಲ್ಲದೆ ಪಿಜ್ಜಾ ಮಾಡಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ಆದ್ರೆ ತವಾದಲ್ಲಿ ಪಿಜ್ಜಾ ತಯಾರಿಸಬಹುದು.
ಪಿಜ್ಜಾ ಕ್ಕೆ ಬೇಕಾಗುವ ಸಾಮಗ್ರಿ :
ಮೈದಾ ಹಿಟ್ಟು – 02 ಕಪ್
ಕ್ಯಾಪ್ಸಿಕಂ – 01
ಬೇಬಿ ಕಾರ್ನ್ – 03
ಪಿಜ್ಜಾ ಸಾಸ್ – 1/2
ಮೊಝರೆಲ್ಲಾ ಚೀಸ್ – 1/2 ಕಪ್
ಆಲಿವ್ ಆಯಿಲ್ – 02 ಚಮಚ
ಸಕ್ಕರೆ – ಸಣ್ಣ ಚಮಚ
ಯೀಸ್ಟ್ – ಸಣ್ಣ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಪಿಜ್ಜಾ ಮಾಡುವ ವಿಧಾನ :
ಪಿಜ್ಜಾ ಮಾಡಲು ಮೊದಲು ಫಿಜಾ ಬೇಸ್ ತಯಾರಿಸಬೇಕು. ಮೈದಾ ಹಿಟ್ಟಿಗೆ ಯೀಸ್ಟ್, ಆಲಿವ್ ಆಯಿಲ್, ಸಕ್ಕರೆ, ಉಪ್ಪನ್ನು ಹಾಕಿ ಮಿಕ್ಸ್ ಮಾಡಿ. ನಂತ್ರ ಬಿಸಿ ನೀರನ್ನು ಹಾಕಿ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟನ್ನು ಕಲಸಿ ಎರಡು ಗಂಟೆಗಳ ಕಾಲ ಮುಚ್ಚಿಡಿ. ನಂತ್ರ ಉಂಡೆ ಕಟ್ಟಿ, ಅರ್ಧ ಸೆಂಟಿಮೀಟರ್ ಪೂರಿ ರೀತಿಯಲ್ಲಿ ಲಟ್ಟಿ ಸಿಕೊಳ್ಳಿ. ನಾನ್ ಸ್ಟಿಕ್ ಮೇಲಿಟ್ಟು ಕಡಿಮೆ ಉರಿಯಲ್ಲಿ ಬೇಯಿಸಿ ಪಿಜ್ಜಾ ಬೇಸ್ ತಯಾರಿಸಿ.
ಕ್ಯಾಪ್ಸಿಕಂ, ಈರುಳ್ಳಿ, ಬೇಬಿ ಕಾರ್ನ್ ಸಣ್ಣಗೆ ಹೆಚ್ಚಿ, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ. ನಂತ್ರ ಪಿಜ್ಜಾ ಬೇಸ್ ಗೆ ಪಿಜ್ಜಾ ಸಾಸ್ ಹಾಕಿ. ಅದ್ರ ಮೇಲೆ ತರಕಾರಿಯನ್ನು ಹಾಕಿ. ಮೊಝರೆಲ್ಲಾ ಚೀಸ್ ಹಾಕಿ. ಪಿಜ್ಜಾವನ್ನು ಮುಚ್ಚಿಡಿ. ಚೀಸ್ ಸಂಪೂರ್ಣವಾಗಿ ಕರಗಿ, ಪಿಜ್ಜಾ ಬೇಸ್ ಕಂದು ಬಣ್ಣಕ್ಕೆ ಬಂದ ಮೇಲೆ ಗ್ಯಾಸ್ ಬಂದ್ ಮಾಡಿ.