ನೀವು ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವವರಾದರೆ ಬೇಲೂರು ನಿಮ್ಮ ಪಟ್ಟಿಯಲ್ಲಿ ಮೊದಲ ಆದ್ಯತೆಯಲ್ಲಿರುತ್ತದೆ. ಹಾಸನ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣ ಬೇಲೂರು. ಶಿಲಾಬಾಲಿಕೆಯರ ಬೇಲೂರು ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿಗೆ ಶಿಲ್ಪಕಲೆಗೆ ಮರುಳಾಗದವರಿಲ್ಲ. ಹಳೆಬೀಡು ಸೋಮನಾಥದ ಜೊತೆಗೆ ಬೇಲೂರು ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿದೆ. ಅರಂಭದಲ್ಲಿ ಇದು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ಬೇಲೂರಿನ ಚೆನ್ನಕೇಶವ ಸ್ವಾಮಿಯ ದೇವಾಲಯ ಇಲ್ಲಿನ ಮುಖ್ಯ ಆಕರ್ಷಣೆ. ಶಿಲ್ಪಕಲೆಗೆ ನಿದರ್ಶನವಾಗಿರುವ ಈ ದೇವಾಲಯದಲ್ಲಿ ಚೆನ್ನಕೇಶವ ಸ್ವಾಮಿಯ ಜತೆ ಸೌಮ್ಯನಾಯಕಿ , ರಂಗನಾಯಕಿ ಅಮ್ಮನವರ ದೇವಸ್ಥಾನವಿದೆ. ದೇಗುಲದ ಹೊರಗಿರುವ ಶಿಲಾಬಾಲಿಕೆಯರು, ಒಳಾಂಗಣದ ಕಂಬಗಳು ಇಲ್ಲಿನ ಪ್ರಮುಖ ಅಕರ್ಷಣೆ.
ಇದು ಬೆಂಗಳೂರಿನಿಂದ 222 ಕಿಮಿ ದೂರದಲ್ಲಿದೆ. ಜಿಲ್ಲಾ ಕೇಂದ್ರದಿಂದ 37 ಕಿಮಿ ವ್ಯಾಪ್ತಿಯಲ್ಲಿದೆ. ಇಲ್ಲಿಗೆ ಬಸ್ಸು ರೈಲಿನ ವ್ಯವಸ್ಥೆ ಇದೆ.