ಏರ್ಟೆಲ್ ಬಳಕೆದಾರರಿಗೆ ರಿಚಾರ್ಜ್ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಟೆಲಿಕಾಂ ಸಂಸ್ಥೆ ಯಲ್ಲಿ ದೊಡ್ಡ ಕಂಪನಿ ಏರ್ ಟೆಲ್. ಏರ್ ಟೆಲ್ ರೀಚಾರ್ಜ್ ಸೇರಿದಂತೆ ಬೇರೆ ಬೇರೆ ಸಿಮ್ ಗಳ ರೀಚಾರ್ಜ್ ದರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಕಳೆದ ವರ್ಷ ಏರ್ ಟೆಲ್ ನ ಕನಿಷ್ಠ ರೀಚಾರ್ಜ್ ದರ ಕೂಡ ಏರಿಕೆಯಾಗಿತ್ತು. 99 ಇದ್ದ ದರ 155 ಕ್ಕೆ ಏರಿಕೆ ಕಂಡಿತ್ತು. ಕೆಲವು ರಾಜ್ಯಗಳಲ್ಲಿ ಮಾತ್ರ ಈ ದರ ಜಾರಿಯಾಗಿತ್ತು. ಇದನ್ನು ಈಗ ವಿಸ್ತರಣೆ ಮಾಡಲಾಗಿದೆ‌.

ಹೌದು, ಹರಿಯಾಣ, ಒಡಿಶಾದಲ್ಲಿ ಜಾರಿ ಮಾಡಿದ್ದ ದರವನ್ನು ಇದೀಗ ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಉತ್ತರ ಪ್ರದೇಶ, ಈಶಾನ್ಯ ಸೇರಿ 7 ರಾಜ್ಯಗಳಲ್ಲಿ ವಿಸ್ತರಿಸಿದೆ ಈ ಕಂಪನಿ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಈ ದರವೇ ಇರಲಿದೆ.

ಇನ್ನು ಈ ಹೊಸ ದರದಲ್ಲಿ ಮೊದಲಿದ್ದ 99 ರೂ. ರೀಚಾರ್ಜ್ ಯೋಜನೆ 28 ದಿನಗಳ ಅವಧಿಗೆ ಇತ್ತು. ಜೊತೆಗೆ 1 ಜಿಬಿ ಡೇಟಾ, 300 ಸಂದೇಶಗಳು ಮತ್ತು ಪ್ರತಿ ಕರೆಯ ನಿಮಿಷಕ್ಕೆ 2.5 ರೂಪಾಯಿ ದರ ಆಗಲಿತ್ತು. ಬದಲಾಯಿಸಿದ ದರದಲ್ಲಿ 155 ರೂ.ಗೆ ಕರೆಗಳನ್ನು ಅನಿಮಿಯತ ಇದೆ. ಉಳಿದಂತೆ ಅದೇ ಸೌಲಭ್ಯಗಳು ಮುಂದುವರಿಯಲಿವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read