alex Certify ಏರುವ ತೂಕಕ್ಕೂ ಗ್ರಹ ದೋಷಕ್ಕೂ ಇದೆ ಸಂಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರುವ ತೂಕಕ್ಕೂ ಗ್ರಹ ದೋಷಕ್ಕೂ ಇದೆ ಸಂಬಂಧ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೇ ಸಮನೆ ಏರುವ ತೂಕಕ್ಕೆ ಗ್ರಹದೋಷ ಕೂಡ ಕಾರಣ. ಹೆಚ್ಚುತ್ತಿರುವ ತೂಕ ನಿಮಗೆ ನಷ್ಟವನ್ನು ಮಾತ್ರ ತರಲು ಸಾಧ್ಯ. ಇದ್ರಿಂದ ಯಾವುದೇ ಲಾಭವಿಲ್ಲ. ತೂಕ ಇಳಿಸಲು ಎಷ್ಟೇ ಕಸರತ್ತು ಮಾಡಿದ್ರೂ ಪ್ರಯೋಜನವಾಗಲಿಲ್ಲವೆಂದಾದ್ರೆ ಜಾತಕವನ್ನು ಪರಿಶೀಲಿಸಿಕೊಳ್ಳಿ. ಗ್ರಹ ದೋಷ, ಏನೇ ಮಾಡಿದ್ರೂ ತೂಕ ಇಳಿಸಿಕೊಳ್ಳಲು ಬಿಡುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ, ಕರ್ಕ, ವೃಷಭ, ಮೀನ, ವೃಶ್ಚಿಕ, ತುಲಾ ಹಾಗೂ ಮಕರ ರಾಶಿಯವರನ್ನು ತೂಕ ಹೆಚ್ಚಳ ಹೆಚ್ಚಾಗಿ ಕಾಡುತ್ತದೆ. ಚಂದ್ರ ಹಾಗೂ ಶುಕ್ರನ ಕಾರಣಕ್ಕೆ ತೂಕ ಹೆಚ್ಚಾಗುತ್ತದೆ. ಸೋಮವಾರ ಉಪವಾಸ ಮಾಡುವುದ್ರಿಂದ ಹಾಗೂ ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದು ಇದಕ್ಕೆ ಪರಿಹಾರ. ಹಣೆಗೆ ಬಿಳಿ ಚಂದನವನ್ನು ಹಚ್ಚಿಕೊಳ್ಳಿ.

ಮುಖ್ಯವಾಗಿ ಬ್ರಹಸ್ಪತಿ  ತೂಕ ಹೆಚ್ಚಾಗಲು ಮುಖ್ಯ ಕಾರಣ. ಕೆಲವೊಮ್ಮೆ ಚಂದ್ರ ಹಾಗೂ ಶುಕ್ರ ಕೆಟ್ಟ ಸ್ಥಾನದಲ್ಲಿದ್ದರೂ ಬೊಜ್ಜು ಜಾಸ್ತಿಯಾಗುತ್ತದೆ. ಜಾತಕದಲ್ಲಿ ಗ್ರಹಗಳು ಬದಲಾದಂತೆ ತೂಕದಲ್ಲಿಯೂ ಏರುಪೇರಾಗುತ್ತದೆ. ಹುಟ್ಟುವಾಗ ದಪ್ಪಗಿದ್ದ ಮಗು ಆ ನಂತ್ರ ತೆಳ್ಳಗಾಗುತ್ತದೆ. ಇದಕ್ಕೆ ಕೂಡ ಗ್ರಹದಲ್ಲಿನ ಬದಲಾವಣೆ ಕಾರಣ. ಮಗುವಿಗೆ ವಾರದಲ್ಲಿ ಎರಡು ದಿನ ಪಂಚಾಮೃತ ನೀಡಬೇಕು. ತಾಮ್ರದ ಲೋಟದಲ್ಲಿ ನೀರನ್ನು ಕುಡಿಸಬೇಕು.

9 ವರ್ಷದಿಂದ 30 ವರ್ಷದೊಳಗೆ ತೂಕ ಹೆಚ್ಚಾಗುತ್ತಿದ್ದರೆ ಅದಕ್ಕೆ ಬ್ರಹಸ್ಪತಿ ಹಾಗೂ ರಾಹು ಕಾರಣ. ಬ್ರಹಸ್ಪತಿ ಹಾಗೂ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಬಾಯಿ ರುಚಿ ಹೆಚ್ಚಾಗುತ್ತದೆ. ಕಂಡಿದ್ದೆಲ್ಲ ತಿನ್ನುವ ಆಸೆಯಾಗುತ್ತದೆ. ತೂಕ ಹೆಚ್ಚಾಗುತ್ತಿದ್ದರೆ ಪ್ರತಿ ದಿನ ನಿಂಬು ನೀರನ್ನು ಕುಡಿಯಿರಿ. ಚಕ್ಕಲಪಟ್ಟೆ ಹಾಕಿ ನೆಲದ ಮೇಲೆ ಕುಳಿತು ಊಟ ಮಾಡಿ. ಮದುವೆ ನಂತ್ರ ತೂಕ ಹೆಚ್ಚಾಗುತ್ತಿದ್ದರೆ ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...