ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಈ ತಾಣ ಮುರ್ಡೇಶ್ವರ

ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಮುರ್ಡೇಶ್ವರವೂ ಒಂದು. ಬೀಚ್ ನ ಅಕರ್ಷಕ ಪರಿಸರದೊಂದಿಗೆ ಬೃಹತ್ ಈಶ್ವರನ ಮೂರ್ತಿ ಇಲ್ಲಿಗೆ ಆಧ್ಯಾತ್ಮಿಕ ಮಹತ್ವವನ್ನು ತಂದು ಕೊಟ್ಟಿದೆ.

ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಈ ತಾಣದಲ್ಲಿ ಬೇಸಿಗೆಯಲ್ಲೂ ತಂಪಾದ ಗಾಳಿ ಬೀಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿದವರು ಆ ತಾಣವನ್ನು ಮರೆಯಲು ಸಾಧ್ಯವೇ ಇಲ್ಲ. ಇಲ್ಲಿ ವಿಶ್ವದ ಮೂರನೆಯ ಅತಿ ದೊಡ್ಡ ಶಿವನ ವಿಗ್ರಹವಿದೆ. 20 ಮಹಡಿಗಳ ರಾಜ ಗೋಪುರವಿದೆ. ಇದು 237 ಅಡಿ ಎತ್ತರವಿದೆ.

ಇಲ್ಲಿರುವ ಮುರುಡೇಶ್ವರ ಗೋಕರ್ಣದಲ್ಲಿ ನೆಲೆಯಾದ ಆತ್ಮಲಿಂಗದ ತುಣುಕಂತೆ. 18ನೇ ಮಹಡಿಯ ಮೇಲೆ ಹತ್ತಿ ನಿಂತರೆ ಕಾಣುವ ಉದ್ದಾನುದ್ದ ಬೀಚಿನ ವಿಹಂಗಮ ಚಿತ್ರಣ, ಭಕ್ತರನ್ನು ಮರುಳು ಮಾಡುವಂತಿದೆ. ಎತ್ತರದ ಕಲ್ಲುಬಂಡೆಯ ಮೇಲೆ ಕುಳಿತ ಭಂಗಿಯಲ್ಲಿರುವ ಬೃಹತ್ ರೂಪಿ ಶಿವನ ಕಲಾ ಸೃಷ್ಟಿಯೇ ಕಣ್ಣಿಗೆ ಹಬ್ಬದಂತಿದೆ. ಪ್ರವಾಸಿಗರಿಗೆ ಎಲ್ಲಾ ರೀತಿಯ ವ್ಯವಸ್ಥೆಗಳೂ ಇಲ್ಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read