ಎರಡು ಪಾರ್ಟ್ ನಲ್ಲಿ ಬರ್ತಿದೆ ‘ಸಪ್ತ ಸಾಗರದಾಚೆ’ ಚಿತ್ರ: ರಕ್ಷಿತ್ ಶೆಟ್ಟಿ ಬರ್ತ್ ಡೇಗೆ ಮೋಷನ್ ಪೋಸ್ಟರ್ ರಿಲೀಸ್

ಬೆಂಗಳೂರು : ಚಾರ್ಲಿ (Charlie) ಸಿನಿಮಾದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಸಿನಿಮಾದ ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿಸಿತ್ತು. ಇಂದು ನಟ ರಕ್ಷಿತ್ ಶೆಟ್ಟಿ (Rakshit Shetty) ಹುಟ್ಟು ಹಬ್ಬದ ಹಿನ್ನೆಲೆ ಅವರ ಹೊಸ ಸಿನಿಮಾ ‘ಸಪ್ತ ಸಾಗರದಾಚೆ’ ಚಿತ್ರದ ಬಗ್ಗೆ ಬಿಗ್ ಅನೌನ್ಸ್ ಮೆಂಟ್ ಹೊರಬಿದ್ದಿದೆ.

ಯೆಸ್, ನಟ ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬದ ಹಿನ್ನೆಲೆ ಅವರ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತಂಡದ ಕಡೆಯಿಂದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗುತ್ತಿದ್ದು, ಚಿತ್ರದ ಮೋಷನ್ ಪೋಸ್ಟರ್ (Motion poster) ಬಹಳ ಕುತೂಹಲ ಮೂಡಿಸಿದೆ. ಜೂನ್ 15ರಂದು ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಲಿದೆ.

‘’ನಿಮ್ಮ ಮನು ಇಂದು ವಿಶೇಷ ಪ್ರಕಟಣೆಯೊಂದಿಗೆ ಬಂದಿದ್ದಾನೆ,. ಸಮಯ, ಪ್ರೀತಿ ಮತ್ತು ಕನಸುಗಳಿಂದ ಸೂಕ್ಷ್ಮವಾಗಿ ಕೆತ್ತಲಾದ ಎಸ್ಎಸ್ಇಯನ್ನು ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ತರಲಾಗುವುದು – ಸೈಡ್ ಎ ಮತ್ತು ಸೈಡ್ ಬಿ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಎರಡೂ ಭಾಗಗಳ ಬಿಡುಗಡೆಯ ದಿನಾಂಕವನ್ನು( Release dat) ಜೂನ್ 15 ರಂದು ಘೋಷಿಸಲಾಗುವುದು. ನೀವು ಅದನ್ನು ಯಾವಾಗಲೂ ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ’’ ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read