ಕೆಲವರಿಗೆ ಹೊಟ್ಟೆ ತುಂಬಾ ಊಟವಾದ ತಕ್ಷಣ ಒಂದೆರಡು ಲೋಟ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಇದು ಒಳ್ಳೆಯದಲ್ಲ. ಊಟ ಮಾಡುವಾಗ ವಿಪರೀತ ಬಾಯಾರಿಕೆಯಾದರೆ ಅಥವಾ ಖಾರವಾದರೆ ನೀರು ಕುಡಿಯಿರಿ. ಅದೂ ಕೂಡ ಹೆಚ್ಚು ಕುಡಿಯುವುದು ಒಳ್ಳೆಯದಲ್ಲ.
ಊಟಕ್ಕೆ ಮುನ್ನ ಬೇಕಿದ್ದಷ್ಟು ನೀರು ಕುಡಿಯಿರಿ. ಇದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುವುದು ಮಾತ್ರವಲ್ಲ, ಕಡಿಮೆ ಆಹಾರ ಹೊಟ್ಟೆಯಲ್ಲಿ ಹಿಡಿಯುತ್ತದೆ. ಬಹುಬೇಗ ತೂಕ ಕಳೆದುಕೊಳ್ಳಲು ಇದು ನೆರವಾಗುತ್ತದೆ.
ಊಟವಾದ ತಕ್ಷಣ ನೀರು ಕುಡಿದರೆ ಜೀರ್ಣಾಂಗ ಪ್ರಕ್ರಿಯೆ ಬಲು ನಿಧಾನವಾಗುತ್ತದೆ. ಊಟ ಮಾಡುವ ಒಂದು ಗಂಟೆ ಮೊದಲೇ ಸಾಕಷ್ಟು ನೀರು ಕುಡಿಯುವುದು ಅತ್ಯುತ್ತಮ ವಿಧಾನ.
ಊಟವಾದ ತಕ್ಷಣ ಚಹಾ, ಕಾಫೀ ಅಥವಾ ಜ್ಯೂಸ್ ನಂಥ ತಂಪು ಪಾನೀಯ ಕುಡಿಯುವುದೂ ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುತ್ತದೆ. ಇದರಿಂದ ರಕ್ತಹೀನತೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಊಟವಾದ ತಕ್ಷಣ ಸಿಗರೇಟು ಸೇವಿಸುವುದರಿಂದಲೂ ಹಲವು ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಈ ಅಭ್ಯಾಸವನ್ನೂ ಬಿಟ್ಟು ಬಿಡಿ.