ಊಟದ ನಂತರ ನಾವು ಕೆಲವು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ.
ಮಧ್ಯಾಹ್ನ ಅಥವಾ ರಾತ್ರಿ ಆಹಾರ ಸೇವಿಸಿದ ತಕ್ಷಣ ನಿದ್ದೆ ಮಾಡುವ ಅಭ್ಯಾಸ ತುಂಬಾ ಜನರಿಗಿದೆ. ತಕ್ಷಣ ಮಲಗುವುದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ. ಆಗ ಹುಳಿ ತೇಗಿನ ಸಮಸ್ಯೆ, ಎದೆ ಉರಿ, ಹೊಟ್ಟೆಯಿಂದ ಸದ್ದು ಬರುವ ಸಮಸ್ಯೆಗಳು ಕೂಡ ಕಂಡು ಬರುತ್ತದೆ. ಆದ್ದರಿಂದ ಆಹಾರ ಸೇವಿಸಿದ ತಕ್ಷಣ ಮಲಗುವ ಅಭ್ಯಾಸ ಬಿಡಿ.
ಊಟವಾದ ತಕ್ಷಣ ಕೆಲವರಿಗೆ ಸಿಹಿ ತಿನ್ನುವ ಅಭ್ಯಾಸ ಇರುತ್ತದೆ. ಸಕ್ಕರೆಯಿಂದ ಮಾಡಿರುವಂತಹ ಸಿಹಿ ತಿಂಡಿಗಳನ್ನು ಊಟ ಅದ ತಕ್ಷಣ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಹಾಗೂ ಮೂತ್ರ ಪಿಂಡಕ್ಕೆ ಸಂಬಂಧಿಸಿದ ರೋಗಗಳು ಬರಬಹುದು. ಹಾಗಾಗಿ ಊಟ ಆದ ತಕ್ಷಣ ಸಿಹಿ ತಿಂಡಿ ತಿನ್ನಬೇಡಿ. ಆಹಾರ ಸೇವಿಸಿದ ತಕ್ಷಣ ಕಾಫಿ ಅಥವಾ ಚಹಾ ಸೇವಿಸುವುದರಿಂದ ಆಹಾರದಲ್ಲಿರುವ ಕಬ್ಬಿಣಾಂಶ ಹಾಗೂ ಪ್ರೊಟೀನ್ ಗಳನ್ನು ದೇಹ ಸರಿಯಾದ ರೀತಿಯಲ್ಲಿ ಸ್ವೀಕರಿಸದೆ ಇರಬಹುದು.
ಇದರಿಂದ ಬೊಜ್ಜು, ಕೂದಲು ಬೇಗನೆ ಬೆಳ್ಳಗಾಗುವುದು, ಅಸಿಡಿಟಿ ಹಾಗೂ ಮೊಡವೆ ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಊಟ ಅದ ತಕ್ಷಣ ಕಾಫಿ ಅಥವಾ ಚಹಾ ಕುಡಿಯಬೇಡಿ.