
ಹೈದರಾಬಾದ್: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಜೊತೆಗೆ ಹೋಟೆಲ್ ಫುಡ್ ಗಳ ದರವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇಲ್ಲೊಂದು ಹೋಟೆಲ್ ನಲ್ಲಿ ಬರಿ ಎರಡು ಇಡ್ಲಿ ದರ ಬರೋಬ್ಬರಿ 1200 ರೂಪಾಯಿ ಎಂದರೆ ನಂಬುತ್ತೀರಾ? ನಂಬಲೇ ಬೇಕು.
ಅದೇನು ಬರಿ ಎರಡು ಇಡ್ಲಿ, ಸಾಂಬಾರ್ ಗೆ 1200 ರೂಪಾಯಿ ಹೇಳಲು ಅದೇನು ಚಿನ್ನದ ಇಡ್ಲಿನಾ? ಎಂದು ಕೇಳದೆ ಇರಲ್ಲ. ಹೌದು ಹೈದರಾಬಾದ್ ನ ಈ ಹೋಟೆಲ್ ನಲ್ಲಿ 2 ಇಡ್ಲಿ ದರ 1200 ರೂಪಾಯಿ. ಇದು ಅಂತಿಂಥಾ ಇಡ್ಲಿ ಅಲ್ಲ, ಚಿನ್ನದ ಲೇಪನವುಳ್ಳ ಇಡ್ಲಿ…
ಹೈದರಾಬಾದ್ ನ ಹೊರವಲಯದಲ್ಲಿರುವ ಭಾಗ್ಯ ನಗರದಲ್ಲಿನ ಕೆಫೆಯೊಂದರಲ್ಲಿ ಚಿನ್ನದ ಲೇಪನವುಳ್ಳ ಇಡ್ಲಿ ಸಿಗುತ್ತದೆ. ಇಲ್ಲಿ ಚಿನ್ನದ ಇಡ್ಲಿ ಮಾತ್ರವಲ್ಲ ಬಂಗಾರದ ದೋಸೆ, ಗುಲಾಬ್ ಜಾಮೂನ್, ಬಾಜಿ, ಖೋವಾ ಗುಲಾಬ್ ಜಾಮೂನ್ ಸೇರಿದಂತೆ ಹಲವು ವಿಧದ ಖಾದ್ಯಗಳು ಸಿಗುತ್ತವೆ.
ಇಲ್ಲಿನ ಇಡ್ಲಿ, ದೋಸೆ ರುಚಿ ನೋಡಲು ಜನಸಾಮಾನ್ಯರ ಕೈಗೆಟುಕುವ ರೇಟಿಲ್ಲ. ಆದರೂ ಈ ಹೋಟೆಲ್ ಸ್ಪೆಷಲ್ ಇಡ್ಲಿ, ದೋಸೆಗಾಗಿ ಜನರು ಬರುವುದಂತು ಕಡಿಮೆಯೇನೂ ಇಲ್ಲ.