ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಸಾಕಷ್ಟು ವಸ್ತುಗಳನ್ನ ದಾನದ ರೂಪದಲ್ಲಿ ನೀಡಿ ಬಿಡ್ತೇವೆ.
ಇದರಿಂದ ನಮಗೆ ಒಳ್ಳೆಯದಾಗೋದಕ್ಕಿಂತ ಹೆಚ್ಚು ನಷ್ಟವಾಗೋದೇ ಜಾಸ್ತಿ. ಅಂತಹ ವಸ್ತುಗಳು ಯಾವುದೆಂದು ನೋಡೋಣ ಬನ್ನಿ.
ಮನೆಯಲ್ಲಿ ನೀವು ಪ್ಲಾಸ್ಟಿಕ್ ಉತ್ಪನ್ನಗಳನ್ನ ಬಳಕೆ ಮಾಡುತ್ತೀರಿ. ಪ್ಲಾಸ್ಟಿಕ್ ವಸ್ತುಗಳನ್ನ ನಿಮ್ಮ ಉಪಯೋಗಕ್ಕಾಗಿ ಕೊಳ್ಳಬಹುದು. ಆದರೆ ಇದನ್ನ ಬೇರೆಯವರಿಗೆ ಉಡುಗೊರೆ ಇಲ್ಲವೇ ದಾನದ ರೂಪದಲ್ಲಿ ನೀಡಲೇಬೇಡಿ.
ಪೊರಕೆಯನ್ನ ಯಾರಿಗಾದರೂ ಉಚಿತವಾಗಿ ಕೊಡೋದು ಅನಿಷ್ಟ ಎಂದು ಹೇಳಲಾಗುತ್ತೆ. ಇದರಿಂದ ಮನೆಯಲ್ಲಿ ಅಶುಭ ಉಂಟಾಗಲಿದೆ. ಸಾಮಾನ್ಯವಾಗಿ ಗೃಹ ಪ್ರವೇಶದ ಸಂದರ್ಭದಲ್ಲಿ ಸ್ಟೀಲ್ ಪಾತ್ರೆಗಳನ್ನ ಉಡುಗೊರೆಯಾಗಿ ಕೊಟ್ಟು ಬಿಡ್ತೇವೆ. ಇಲ್ಲವೇ ಬೇಡಾದ ಪಾತ್ರೆಗಳನ್ನ ದಾನ ಮಾಡುತ್ತೇವೆ. ಆದರೆ ಸ್ಟೀಲ್ ಪಾತ್ರೆಗಳನ್ನ ದಾನ ಮಾಡೋದು ಕೂಡ ಒಳ್ಳೆಯದಲ್ಲ.
ನಮಗಿಂತ ಹೆಚ್ಚಿನ ಸಂಪತ್ತು ಹಾಗೂ ಬ್ರಾಹ್ಮಣರಿಗೆ ಎಂದಿಗೂ ಬಳಸಿದ ಬಟ್ಟೆಯನ್ನ ಕೊಡಬೇಡಿ. ಬೇಕಿದ್ದರೆ ಬಡವರಿಗೆ ನಿಮ್ಮ ಬಟ್ಟೆಯನ್ನ ದಾನ ಮಾಡಿ.
ತಾಜಾ ಆಹಾರವನ್ನ ದಾನ ಮಾಡೋದು ಒಳ್ಳೆಯದು ಎಂದು ಹೇಳಲಾಗುತ್ತೆ. ಆದರೆ ಹಳಸಿದ ಆಹಾರವನ್ನ ನೀಡೋದ್ರಿಂದ ಮನೆಗೆ ಅಶುಭ ಉಂಟಾಗಲಿದೆ.