ಮೇಷ : ಸಂಬಳ ಪಡೆಯುವ ಕೆಲಸದಲ್ಲಿ ಇರುವ ವ್ಯಕ್ತಿಗಳು ಇಂದು ಬಡ್ತಿ ಭಾಗ್ಯ ಪಡೆಯಲಿದ್ದಾರೆ.
ಸರ್ಕಾರಿ ಉದ್ಯೋಗಿಗಳಿಗೆ ದಿಢೀರ್ ವರ್ಗಾವಣೆ ಕಾದಿದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲಿದ್ದೀರಿ.
ಗರ್ಭಿಣಿಯರಿಗೆ ಇಂದು ಶುಭ ಸುದ್ದಿ ಕಾದಿದೆ.
ವೃಷಭ : ನಿಮ್ಮ ಜೀವನದ ಕಠಿಣ ಸಮಸ್ಯೆಗಳನ್ನು ಪರಿಹರಿಸಲು ಪೋಷಕರು ಸಹಾಯ ಮಾಡಲಿದ್ದಾರೆ. ಇಂದು ನಿಮ್ಮ ಆತ್ಮವಿಶ್ವಾಸವು ನಿಮ್ಮನ್ನು ಉತ್ತುಂಗದಲ್ಲಿ ಇಡಲಿದೆ. ಸಾರ್ವಜನಿಕ ಜೀವನದಲ್ಲಿ ಗೌರವ ಗಳಿಸುವಿರಿ. ಗರ್ಭಿಣಿಯರು ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ.
ಮಿಥುನ : ವೃತ್ತಿ ರಂಗದಲ್ಲಿ ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ. ಮನೆ ನವೀಕರಣ ಕಾರ್ಯವು ಇಂದಿನಿಂದ ಆರಂಭವಾಗಲಿದೆ. ನಿಮ್ಮ ಪತ್ನಿಯ ಆರೋಗ್ಯವು ಹದಗೆಡಲಿದೆ. ಇದರಿಂದ ನಿಮಗೆ ಆತಂಕ ಉಂಟಾಗಲಿದೆ.
ಕಟಕ : ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದ್ದು ಅನೇಕ ಜನರು ನಿಮ್ಮನ್ನು ಭೇಟಿಯಾಗಲಿದ್ದಾರೆ. ವ್ಯಾಪಾರ – ವ್ಯವಹಾರಗಳಲ್ಲಿ ನೀವು ತೋರುವ ಧೈರ್ಯವೇ ನಿಮ್ಮನ್ನು ಕಾಪಾಡಲಿದೆ. ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ.
ಸಿಂಹ : ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಯೋಜನೆಗಳು ಚುರುಕು ಪಡೆಯಲಿದೆ. ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಗೆಲುವು ನಿಮ್ಮದಾಗಲಿದೆ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ದಾಯಾದಿ ಕಲಹ ಇರಲಿದೆ.
ಕನ್ಯಾ : ಎಷ್ಟೇ ಪ್ರಯತ್ನ ಪಟ್ಟರೂ ಪುತ್ರಿಗೆ ಕಂಕಣ ಭಾಗ್ಯ ಕೂಡಿಲ್ಲ ಎಂದು ತಲೆಕೆಡಿಸಿಕೊಂಡಿದ್ದ ನೀವು ಇಂದು ನಿಟ್ಟುಸಿರು ಬಿಡಲಿದ್ದೀರಿ. ನಿಮ್ಮ ಮನೆಗೆ ವೈವಾಹಿಕ ಸಂಬಂಧ ಹುಡುಕಿಕೊಂಡು ಬರಲಿದೆ. ಇಂದು ಇಡೀ ದಿನ ನೀವು ಕೆಲಸ ಕಾರ್ಯಗಳಲ್ಲಿ ಮಗ್ನರಾಗಲಿದ್ದೀರಿ.
ತುಲಾ : ನೀವು ಬಹಳ ದಿನಗಳಿಂದ ಕನಸು ಕಾಣುತ್ತಿದ್ದ ಕೆಲಸವು ಇಂದು ನಿಮಗೆ ಸಿಗಲಿದೆ. ಕುಟುಂಬಸ್ಥರ ಸಮೇತ ಇಂದು ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದೀರಿ. ದಾಯಾದಿ ಕಲಹದಿಂದ ನಿಮ್ಮ ಮನೆಯ ನೆಮ್ಮದಿ ನಶಿಸಿ ಹೋಗಬಹುದು.
ವೃಶ್ಚಿಕ : ವೃತ್ತಿ ಜೀವನದಲ್ಲಿ ಇಂದು ನೀವು ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿದ್ದೀರಿ. ಇದರಿಂದ ನಿಮಗೆ ತುಂಬಾನೇ ಕಷ್ಟ ಉಂಟಾಗಲಿದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಇಂದು ಉತ್ತಮ ಸ್ಥಾನ ಮಾನ ದೊರಕಲಿದೆ.
ಧನು : ನಿಮ್ಮ ದಾಂಪತ್ಯ ಜೀವನವು ಸುಖಮಯವಾಗಿ ಇರಲಿದೆ. ಇಂದು ನಿಮಗೆ ಹೊಸ ಹೊಣೆಗಾರಿಕೆ ಸಿಗಲಿದೆ. ಮಕ್ಕಳ ಓದಿನ ಬಗ್ಗೆ ತಲೆಕೆಡಿಸಿಕೊಳ್ಳುವಿರಿ.
ಮಕರ : ಇಂದು ನಿಮಗೆ ಅದೃಷ್ಟದ ದಿನವಾಗಿದೆ. ವ್ಯಾಪಾರ – ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ಪಡೆಯಲಿದ್ದೀರಿ. ನಿಮ್ಮೆಲ್ಲ ಕಾರ್ಯಗಳಿಗೆ ಪೋಷಕರು ಸಾಥ್ ನೀಡಲಿದ್ದಾರೆ. ಕಚೇರಿಯಲ್ಲಿ ನಿಮಗೆ ಅಪಮಾನವಾಗುವಂತಹ ಪ್ರಸಂಗ ಎದುರಾಗಬಹುದು.
ಕುಂಭ : ವಿದ್ಯಾರ್ಥಿಗಳಿಗೆ ಗುರು ಅನುಗ್ರಹವಿದೆ. ಹೀಗಾಗಿ ಅಂದುಕೊಂಡ ಗುರಿಯನ್ನು ನಿಗದಿಯ ಸಮಯದಲ್ಲಿ ತಲುಪಲಿದ್ದಾರೆ. ಪ್ರೀತಿಪಾತ್ರರು ನಿಮ್ಮಿಂದ ಸಂತೋಷವಾಗಿ ಇರಲಿದ್ದಾರೆ. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿ ಇರಲಿದೆ.
ಮೀನ : ವ್ಯಾಪಾರ ವ್ಯವಹಾರಗಳು ಮಂದಗತಿಯಲ್ಲಿ ಸಾಗಲಿದೆ. ನೀವು ತೆಗೆದುಕೊಂಡ ನಿರ್ಧಾರಗಳಿಗೆ ಬದ್ಧರಾಗಿರಿ. ಪ್ರೀತಿಯ ವಿಚಾರದಲ್ಲಿ ಅದೃಷ್ಟ ನಿಮ್ಮದಾಗಲಿದೆ.