ಮೇಷ ರಾಶಿ: ಈ ಹಿಂದೆ ಇತ್ಯರ್ಥವಾಗಿದ್ದ ಆಸ್ತಿವ್ಯಾಜ್ಯ ಮತ್ತೊಮ್ಮೆ ಸಮಸ್ಯೆಯಾಗಿ ಕಾಡಬಹುದು. ದೂರ ಪ್ರಯಾಣದ ಯೋಗವಿದೆ. ಆರೋಗ್ಯದ ಬಗ್ಗೆ ನೀವು ತೋರಿಸುವ ವಿಶೇಷ ಕಾಳಜಿಯಿಂದ ನೀವು ಸದೃಢವಾಗಿ ಇರಲಿದ್ದೀರಿ. ಖರ್ಚು ವೆಚ್ಚದ ವಿಚಾರದಲ್ಲಿ ಜಾಗರೂಕರಾಗಿದ್ದರೆ ಒಳ್ಳೆಯದು.
ವೃಷಭ: ಉದ್ಯಮ ನಡೆಸುತ್ತಿರುವವರಿಗೆ ಲಾಭ ಕಾದಿದೆ. ಇಂದು ನಿಮ್ಮ ಬಳಿ ಯಾರಾದರೂ ಸಹಾಯ ಹಸ್ತಕ್ಕೆ ಕೈಚಾಚುವ ಸಾಧ್ಯತೆ ಇದೆ.
ಕುಟುಂಬದ ಜೊತೆಯಲ್ಲಿ ಖುಷಿಯ ಕ್ಷಣವನ್ನ ಕಳೆಯಲಿದ್ದೀರಿ. ಪ್ರಯಾಣದಿಂದ ಲಾಭ ಕಾದಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಮಿಥುನ: ಕುಟುಂಬದ ಸಮಸ್ಯೆಯಲ್ಲಿ ಹೆಚ್ಚು ಮೂಗು ತೂರಿಸಲು ಹೋಗದಿರಿ. ಶೈಕ್ಷಣಿಕ ಜೀವನದಲ್ಲಿ ಯಶಸ್ಸಿಗಾಗಿ ಕಾಯುತ್ತಿದ್ದವರಿಗೆ ಶುಭ ಸುದ್ದಿ ಕಾದಿದೆ. ಹಣಕಾಸಿನ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿ ಬರಬಹುದು. ಕಚೇರಿ ಕೆಲಸದಲ್ಲಿ ನೀವು ಸರಿಯಾಗಿ ನಿರ್ಧಾರ ಕೈಗೊಳ್ಳಲು ವಿಫಲರಾದಲ್ಲಿ ನಿಮ್ಮ ಪ್ರಬಲಸ್ಪರ್ಧಿ ನಿಮ್ಮನ್ನ ಹಿಂದಿಕ್ಕುವ ಸಾಧ್ಯತೆ ಇದೆ.
ಕಟಕ: ಮಕ್ಕಳಿಂದ ಶುಭ ಸುದ್ದಿ ಕಾದಿದೆ. ಪ್ರಯಾಣದಲ್ಲಿನ ಒಡನಾಟವು ಹೆಚ್ಚು ಖುಷಿ ನೀಡಬಲ್ಲದು. ಕಚೇರಿಯಲ್ಲಿ ಬಾಕಿಯಾಗಿದ್ದ ಎಲ್ಲಾ ಕೆಲಸಗಳನ್ನ ಪೂರ್ಣಗೊಳಿಸಲು ಸೂಕ್ತ ಸಮಯಾವಕಾಶ ಸಿಗಲಿದೆ. ನಿಮ್ಮ ಕುಟುಂಬದ ಕಿರಿಯ ವಯಸ್ಸಿನ ಮಕ್ಕಳು ಸಾಧನೆ ಮಾಡಿದ ಸುದ್ದಿಯನ್ನ ಕೇಳಲಿದ್ದೀರಿ.
ಸಿಂಹ : ಕುಟುಂಬದಲ್ಲಿನ ಒಬ್ಬ ಸದಸ್ಯನ ಸಹಾಯವು ನಿಮ್ಮಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನ ತುಂಬಲಿದೆ. ದೂರದ ಪ್ರಯಾಣಗಳಿಂದ ದೂರವಿರಿ. ಸ್ನೇಹಿತರ ಜೊತೆ ಉತ್ತಮ ಸಂಭಾಷಣೆ ನಡೆಸಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೆ ಮುದ ಸಿಗಲಿದೆ. ಇನ್ನೊಬ್ಬರ ಮನವೊಲಿಸುವಲ್ಲಿ ನಿಮ್ಮ ಮಾತಿನ ಚಾಕಚಕ್ಯತೆ ಬಹಳ ಪ್ರಯೋಜನಕಾರಿ ಎನಿಸಲಿದೆ. ವ್ಯರ್ಥ ಖರ್ಚು ಮಾಡೋದನ್ನ ನಿಲ್ಲಿಸೋದು ಒಳ್ಳೆಯದು.
ಕನ್ಯಾ: ಮಕ್ಕಳಿಂದ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ನಿಮ್ಮ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದವರಿಂದ ಶುಭ ಸುದ್ದಿ ಕಾದಿದೆ. ಕುಟುಂಬದಲ್ಲಿ ಅನಾರೋಗ್ಯಕ್ಕೀಡಾದವರ ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ತುಲಾ: ದೈಹಿಕ ವ್ಯಾಯಾಮದ ಮೂಲಕ ನಿಮ್ಮ ಆರೋಗ್ಯವನ್ನ ಫಿಟ್ ಆಗಿಡಲಿದೆ. ಮಕ್ಕಳು ನಿಮಗೆ ಹೆಮ್ಮೆ ಎನಿಸುವ ಕಾರ್ಯ ಮಾಡಲಿದ್ದಾರೆ. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಇಲ್ಲ. ಕಚೇರಿ ಕೆಲಸದಲ್ಲಿ ಕೊಂಚ ಕಿರಿಕಿರಿ ಎದುರಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.
ವೃಶ್ಚಿಕ: ನಿಮ್ಮ ನಿದ್ದೆ ಹಾಳು ಮಾಡಲು ಕಾರಣವಾಗುತ್ತಿರುವ ಆಸ್ತಿ ವ್ಯಾಜ್ಯ ಸುಧಾರಣೆ ಕಾಣಲಿದೆ. ಆರೋಗ್ಯದ ಕಡೆ ಕೊಂಚ ಕಾಳಜಿ ವಹಿಸಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂಗಾತಿಯಿಂದ ಒಳ್ಳೆಯ ಉಡುಗೊರೆ ಪಡೆಯಲಿದ್ದೀರಿ.
ಧನಸ್ಸು: ಸಂಗಾತಿಯಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಾ. ಬಹುಕಾಲದಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಕಾಣಲಿದ್ದೀರಿ. ಆರೋಗ್ಯದ ದೃಷ್ಟಿಯಿಂದ ಹೊರಗಡೆಯ ಆಹಾರವನ್ನ ಸಂಪೂರ್ಣವಾಗಿ ತ್ಯಜಿಸಿ.
ಮಕರ: ಕುಟುಂಬ ಸದಸ್ಯರೇ ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಬಹುದು. ಕೆಟ್ಟ ಆಹಾರ ಪದ್ಧತಿ ನಿಮ್ಮ ಆರೋಗ್ಯವನ್ನ ಹಾಳುಗೆಡುವಬಹುದು. ಹೂಡಿಕೆ ಮಾಡುವ ಪ್ಲಾನ್ನಲ್ಲಿ ಇದ್ದರೆ ಇಂದು ನಿಮ್ಮ ಪಾಲಿಗೆ ಒಳ್ಳೆಯ ದಿನ. ಸಂಗಾತಿಯ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಲಿದೆ.
ಕುಂಭ: ಕಚೇರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಮನೆಯಲ್ಲಿ ಕೊಂಚ ಕಿರಿಕಿರಿ ವಾತಾವರಣ ಸೃಷ್ಟಿಯಾಗಬಹುದು. ಸಂಗಾತಿಯೊಂದಿಗೆ ಒಳ್ಳೆಯ ಸಮಯ ಕಳೆಯೋದ್ರಿಂದ ನೆಮ್ಮದಿ ಸಿಗಲಿದೆ.
ಮೀನ: ಅನಿರೀಕ್ಷಿತ ಅತಿಥಿ ಭೇಟಿಯಿಂದ ಮನೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಬಹುದು. ನಿಮ್ಮೆದುರು ಇರುವ ಅವಕಾಶವನ್ನ ಕೈಬಿಡಬೇಡಿ. ಆರ್ಥಿಕ ಸಮಸ್ಯೆ ಸುಧಾರಿಸಲಿದೆ.