alex Certify ಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಮೇಷ ರಾಶಿ

ಆಧ್ಯಾತ್ಮಿಕ ದೃಷ್ಟಿಯಿಂದ ಈ ದಿನ ವಿಶಿಷ್ಟವಾಗಿರುತ್ತದೆ. ನಿಗೂಢ ಮತ್ತು ರಹಸ್ಯ ವಿದ್ಯೆಯನ್ನು ಕಲಿಯುವ ಅವಕಾಶ ಒದಗಿ ಬರಲಿದೆ. ಆಧ್ಯಾತ್ಮಿಕ ಸಿದ್ಧಿ ದೊರೆಯಲಿದೆ. ಹೊಸ ಕಾರ್ಯ ಆರಂಭಕ್ಕೆ ಶುಭ ಸಮಯವಲ್ಲ.

ವೃಷಭ ರಾಶಿ

ದಾಂಪತ್ಯ ಜೀವನದಲ್ಲಿ ವಿಶೇಷ ಆನಂದ ದೊರೆಯಲಿದೆ. ಕುಟುಂಬದವರೊಂದಿಗೆ ಸುತ್ತಾಡಲು ಅಥವಾ ಸಮೀಪದ ಸ್ಥಳಕ್ಕೆ ಪ್ರವಾಸ ತೆರಳಲಿದ್ದೀರಿ. ಸ್ನೇಹಿತರು ಮತ್ತು ಆತ್ಮೀಯರೊಂದಿಗೆ ಉತ್ತಮ ಭೋಜನ ಸವಿಯುವ ಅವಕಾಶ ದೊರೆಯಲಿದೆ.

ಮಿಥುನ ರಾಶಿ

ಕೆಲಸದಲ್ಲಿ ಸಫಲತೆ, ಯಶಸ್ಸು ಮತ್ತು ಕೀರ್ತಿ ದೊರೆಯಲಿದೆ. ಮನೆಯಲ್ಲಿ ಸುಖ-ಶಾಂತಿಯ ವಾತಾವರಣವಿರುತ್ತದೆ. ಶಾರೀರಿಕ ಮತ್ತು ಮಾನಸಿಕ ರೂಪದಲ್ಲಿ ಆರೋಗ್ಯವಾಗಿರುತ್ತೀರಿ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ.

ಕರ್ಕ ರಾಶಿ

ಇವತ್ತು ಪ್ರಶಾಂತವಾಗಿ ದಿನ ಕಳೆಯಿರಿ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಬಹುದು. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಸ್ನೇಹಿತರು ಮತ್ತು ಆತ್ಮೀಯರೊಂದಿಗಿನ ವಾದ-ವಿವಾದದಿಂದ ಭಿನ್ನಾಭಿಪ್ರಾಯ ಮೂಡಬಹುದು.

ಸಿಂಹ ರಾಶಿ

ಕುಟುಂಬದಲ್ಲಿ ವಿರಸದ ವಾತಾವರಣವಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳಿಂದ ಬೇಸರ ಮೂಡುತ್ತದೆ. ಜಮೀನು, ಮನೆ ಇತ್ಯಾದಿ ಆಸ್ತಿ ದಸ್ತಾವೇಜುಗಳಿಗೆ ಸಹಿ ಹಾಕಲು ದಿನ ಉತ್ತಮವಾಗಿಲ್ಲ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಪ್ರೇಮಮಯ ಸಂಬಂಧಗಳಲ್ಲಿ ಕಳೆದು ಹೋಗಲಿದ್ದೀರಿ. ಸಹೋದರ, ಸಹೋದರಿಯರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತೀರಿ. ಅವರಿಂದ ನಿಮಗೆ ಲಾಭವಾಗಲಿದೆ.

ತುಲಾ ರಾಶಿ

ಇವತ್ತು ಮನಸ್ಸು ಗೊಂದಲಮಯವಾಗಿರುತ್ತದೆ. ಹಾಗಾಗಿ ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ಹೊಸ ಕಾರ್ಯವನ್ನು ಆರಂಭಿಸಬೇಡಿ. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡರೆ, ಕುಟುಂಬ ಸದಸ್ಯರ ಜೊತೆಗಿನ ವಾದ – ವಿವಾದದಿಂದ ಪಾರಾಗಬಹುದು.

ವೃಶ್ಚಿಕ ರಾಶಿ

ಕುಟುಂಬದವರೊಂದಿಗೆ ಮೋಜು ಮಸ್ತಿಯಲ್ಲಿ ದಿನ ಕಳೆಯಲಿದ್ದೀರಿ. ಶರೀರ ಮತ್ತು ಮನಸ್ಸು ಪ್ರಸನ್ನವಾಗಿರುತ್ತದೆ. ಪ್ರಿಯ ವ್ಯಕ್ತಿಗಳೊಂದಿಗಿನ ಭೇಟಿ ಸಫಲವಾಗಲಿದೆ. ಶುಭ ಸಮಾಚಾರ ದೊರೆಯುತ್ತದೆ. ಮಿತ್ರರಿಂದ ಒಳ್ಳೆ ಉಪಹಾರ ದೊರೆಯುತ್ತದೆ.

ಧನು ರಾಶಿ

ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಲಿದೆ. ಸ್ವಭಾವದಲ್ಲಿ ಕ್ರೋಧ ಮತ್ತು ಆವೇಶ ತುಂಬಿರುತ್ತದೆ. ಯಾರೊಂದಿಗಾದ್ರೂ ತೀವ್ರ ವಾದ ವಿವಾದ ನಡೆಯುವ ಸಾಧ್ಯತೆ ಇದೆ. ಆರೋಗ್ಯ ಹದಗೆಡಲಿದೆ. ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇರಲಿ.

ಮಕರ ರಾಶಿ

ನಿಮ್ಮ ಮನೆಯಲ್ಲಿ ಶುಭ ಪ್ರಸಂಗ ನಡೆಯಬಹುದು. ಯಾವುದೇ ವಸ್ತುಗಳ ಖರೀದಿಗೆ ಇಂದು ಶುಭದಿನ. ಧನಲಾಭವಿದೆ. ಮಿತ್ರರು ಮತ್ತು ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಆನಂದವಾಗಿ ದಿನ ಕಳೆಯಲಿದ್ದೀರಿ.

ಕುಂಭ ರಾಶಿ

ನಿಮ್ಮ ಎಲ್ಲಾ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಉದ್ಯೋಗ ಮತ್ತು ಉದ್ಯಮ ಕ್ಷೇತ್ರದಲ್ಲಿ ಪರಿಸ್ಥಿತಿ ಅನುಕೂಲಕರವಾಗಿದೆ. ಮನಸ್ಸು ನಿರಾಳಗೊಳ್ಳಲಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಗೌರವ-ಪ್ರತಿಷ್ಠೆ ಹೆಚ್ಚಲಿದೆ.

ಮೀನ ರಾಶಿ

ನಿಮಗೆ ಆಯಾಸ ಮತ್ತು ಆತಂಕದ ಅನುಭವವಾಗಲಿದೆ. ಮಕ್ಕಳ ಸಮಸ್ಯೆ ಕಾಡಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರುತ್ತವೆ. ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...