ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ವಾರ್ತ

ಮೇಷ: ಸಾಂಸಾರಿಕ ಜೀವನದಲ್ಲಿ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಕಚೇರಿ ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳಲಿದ್ದೀರಿ. ಪೋಷಕರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.

ವೃಷಭ: ಆರೋಗ್ಯ ಕೈಕೊಡೋದ್ರಿಂದ ಕಿರಿಕಿರಿ ಅನುಭವಿಸಲಿದ್ದೀರಿ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಹಿತಶತ್ರುಗಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಮಿಥುನ: ಕೆಲಸಕ್ಕೆ ತೆರಳುವ ಮುನ್ನ ಎಲ್ಲಾ ದಾಖಲೆಗಳನ್ನು ತಯಾರು ಮಾಡಿಟ್ಟುಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ. ಮಕ್ಕಳಿಂದ ಶುಭ ವಾರ್ತ ಕೇಳುತ್ತೀರಿ.

ಕಟಕ : ಮನೆಯ ಕಿರಿಯ ಸದಸ್ಯರು ಶುಭವಾರ್ತೆಯನ್ನು ಹೊತ್ತು ತರಲಿದ್ದಾರೆ. ವೈವಾಹಿಕ ಸಂಬಂಧಕ್ಕಾಗಿ ಹುಡುಕಾಡುತ್ತಿರುವವರಿಗೆ ಕಂಕಣ ಭಾಗ್ಯವಿದೆ. ವೃತ್ತಿ ರಂಗದಲ್ಲಿ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗಲಿದೆ. ದಿನಾಂತ್ಯದಲ್ಲಿ ಶುಭ ಸುದ್ದಿ ಕಾದಿದೆ.

ಸಿಂಹ : ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ ಉಂಟಾಗಲಿದೆ. ಲೌಕಿಕ ಜೀವನದಿಂದ ಆಧ್ಯಾತ್ಮದ ಕಡೆಗೆ ಒಲವು ತೋರಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ.

ಕನ್ಯಾ: ವೃತ್ತಿರಂಗದಲ್ಲಿ ದೊಡ್ಡ ಬದಲಾವಣೆಯ ಪರ್ವಕ್ಕೆ ನೀವು ಸಾಕ್ಷಿಯಾಗುತ್ತೀರಿ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ. ಸರ್ಕಾರಿ ಕೆಲಸ ಕಾರ್ಯಗಳು ಸಾಂಘವಾಗಿ ನಡೆಯಲಿದೆ.

ತುಲಾ: ನಿರುದ್ಯೋಗಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡಲ್ಲಿ ಒಳ್ಳೆಯದು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ದಾಯಾದಿಯ ಜೊತೆಗೆ ಕಲಹ ಮುಂದುವರಿಯಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಶುಭ ವಾರ್ತೆ ಕಾದಿದೆ.

ವೃಶ್ಚಿಕ : ಕಚೇರಿ ಕೆಲಸದಲ್ಲಿ ಶ್ರದ್ಧೆಯೊಂದಿದ್ದರೆ ಸಾಲದು ತಾಳ್ಮೆ ಕೂಡ ಬೇಕು ಅನ್ನೋದು ತಲೆಯಲ್ಲಿರಲಿ. ಯಾರೊಂದಿಗೂ ಮನಸ್ತಾಪ ಬೇಡ. ಸಂಗಾತಿ ನೀಡುವ ಸಲಹೆಗಳನ್ನು ಆಲಿಸಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಧನು: ನೀವು ಮಾಡದ ತಪ್ಪಿಗೆ ಅಪವಾದಗಳನ್ನು ಎದುರಿಸಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ ಸ್ಥಗಿತವಾಗೋದ್ರಿಂದ ಅಸಮಾಧಾನ ನೆಲಸಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜವಳಿ ಉದ್ಯಮಿಗಳಿಗೆ ಲಾಭವಿದೆ.

ಮಕರ: ದಾಂಪತ್ಯದಲ್ಲಿ ಇರಿಸು ಮುರಿಸು ಉಂಟಾಗೋದ್ರಿಂದ ನಿಮ್ಮ ನೆಮ್ಮದಿ ಹಾಳಾಗಲಿದೆ. ಮಾನಸಿಕ ಒತ್ತಡ ಹೆಚ್ಚೋದ್ರಿಂದ ಕಚೇರಿ ಕೆಲಸದ ಕಡೆಗೂ ಏಕಾಗ್ರತೆ ಬಾರದು. ಮನೆಯಲ್ಲಿ ಶೀಘ್ರದಲ್ಲೇ ಶುಭಕಾರ್ಯವೊಂದು ನಡೆಯಲಿದೆ. ಮಕ್ಕಳು ನಿಮ್ಮ ನಿರೀಕ್ಷೆಗೆ ತಕ್ಕ ಸಾಧನೆ ತೋರದೇ ನಿಮ್ಮ ಬೇಸರಕ್ಕೆ ಕಾರಣರಾಗಲಿದ್ದಾರೆ.

ಕುಂಭ: ಪರಿಸ್ಥಿತಿ ನಿಮ್ಮ ಪರವಾಗಿ ಇರಲಿದೆ. ಸಾರ್ವಜನಿಕ ಜೀವನದಲ್ಲಿ ರಾಜಕೀಯ ರಂಗದವರಿಗೆ ಉತ್ತಮ ಪ್ರಶಂಸೆ ಕೇಳಿಬರಲಿದೆ. ಸಂಗಾತಿಯ ಇಷ್ಟಕ್ಕೆ ವಿರೋಧವಾಗಿ ನಡೆಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಕುಲದೇವತೆಯನ್ನು ಆರಾಧಿಸಿ.

ಮೀನ: ಕಚೇರಿ ಕೆಲಸದ ಕಡೆಗೆ ಇನ್ನಷ್ಟು ಗಮನ ನೀಡಲೇಬೇಕು. ಮೇಲಾಧಿಕಾರಿಗಳು ನಿಮ್ಮನ್ನು ಗುರುತಿಸುವಂತ ಸಾಧನೆ ಮಾಡಿ ತೋರಿಸಿ. ನಿಮ್ಮ ಪ್ರತಿಯೊಂದು ಕಾರ್ಯಕ್ಕೂ ಕುಟುಂಬಸ್ಥರ ಬೆಂಬಲ ಸಿಗಲಿದೆ. ಬೆನ್ನು ನೋವಿನ ಸಮಸ್ಯೆಗೆ ಒಳಗಾಗುವಿರಿ. ಧಾರ್ಮಿಕ ವಿಚಾರದತ್ತ ಮನಸ್ಸು ವಾಲಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read