ಈ ಬಣ್ಣದ ಪರ್ಸ್ ಬದಲಿಸುತ್ತೆ ನಿಮ್ಮ ʼಅದೃಷ್ಟʼ

ಪ್ರತಿಯೊಬ್ಬರು ಪರ್ಸ್ ಬಳಸ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಪರ್ಸ್ ಗಳು ಲಭ್ಯವಿದೆ. ಬಣ್ಣ ಬಣ್ಣದ ಪರ್ಸ್ ನಲ್ಲಿ ಹಣ, ಕಾರ್ಡ್ ಜೊತೆಗೆ ದೇವರ ಫೋಟೋ ಅಥವಾ ತಮಗಿಷ್ಟವಾದವರ ಫೋಟೋ ಇಟ್ಟುಕೊಳ್ತಾರೆ ಜನರು. ಕಪ್ಪು ಬಣ್ಣದ ಪರ್ಸ್ ಇಟ್ಟುಕೊಂಡ್ರೆ ಲಕ್ಷ್ಮಿ ಕೃಪೆ ನಮ್ಮ ಮೇಲಿರುತ್ತದೆ ಎಂದು ಕೆಲವರು ಹೇಳ್ತಾರೆ. ನಮ್ಮ ಜನ್ಮ ದಿನಾಂಕಕ್ಕೂ ಪರ್ಸ್ ಗೂ ಸಂಬಂಧವಿದೆ.

ಜನ್ಮ ದಿನಾಂಕಕ್ಕೆ ತಕ್ಕಂತೆ ಬಣ್ಣದ ಪರ್ಸ್ ಇಟ್ಟುಕೊಂಡ್ರೆ ಒಳ್ಳೆಯದು.

ಯಾವುದೇ ತಿಂಗಳಿನ 1, 10, 19 ಹಾಗೂ 28ನೇ ತಾರೀಕಿನಂದು ನೀವು ಜನಿಸಿದ್ದರೆ ಕೆಂಪು ಬಣ್ಣದ ಹಾಗೂ ಬದನೆಕಾಯಿ ಬಣ್ಣದ  ಪರ್ಸ್ ಖರೀದಿ ಮಾಡಿ. ಜೊತೆಗೆ ಒಂದು ರೂಪಾಯಿಯ 7 ನೋಟುಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿ ನಿಮ್ಮಬಳಿ ಇಟ್ಟುಕೊಳ್ಳಿ.

ನೀವು 2, 11, 20 ಮತ್ತು 29 ನೇ ತಾರೀಕಿನಂದು ಜನಿಸಿದ್ದರೆ ಬಿಳಿ ಬಣ್ಣದ ಪರ್ಸ್ ಇಟ್ಟುಕೊಳ್ಳಿ. ಲಕ್ಷ್ಮಿ ಸದಾ ಇರಬೇಕೆಂದು ಬಯಸಿದ್ರೆ ಒಂದು ರೂಪಾಯಿ ಹಾಗೂ 20 ರೂಪಾಯಿಯ ಎರಡು ನೋಟುಗಳನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ.

ಜನ್ಮ ದಿನಾಂಕ 3, 12, 21, 30 ರಲ್ಲೊಂದಾಗಿದ್ದರೆ ಹಳದಿ ಅಥವಾ ಮೆಹಂದಿ ಬಣ್ಣದ ಪರ್ಸ್ ಖರೀದಿ ಮಾಡಿ. ಇದು ನಿಮಗೆ ಶುಭ. 10 ರೂಪಾಯಿಯ ಮೂರು ನೋಟು ಹಾಗೂ ಒಂದು ರೂಪಾಯಿಯ 1 ನೋಟನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ಪರ್ಸ್ ನಲ್ಲಿಡಿ. ಸ್ವಲ್ಪ ಕೇಸರಿಯನ್ನು ಪರ್ಸ್ ನಲ್ಲಿಟ್ಟುಕೊಳ್ಳಿ.

4, 13, 22 ಮತ್ತು 31 ನೇ ತಾರೀಕಿನಂದು ಜನಿಸಿದವರು ಬದನೆಕಾಯಿ ಬಣ್ಣದ ಪರ್ಸ್ ಇಟ್ಟುಕೊಳ್ಳಿ. 10 ರೂಪಾಯಿಯ ಎರಡು ನೋಟು ಹಾಗೂ 20 ರೂಪಾಯಿಯ ಎರಡು ನೋಟನ್ನು ಪರ್ಸ್ ನಲ್ಲಿಟ್ಟುಕೊಳ್ಳಿ. ಮನೆಯ ಮಣ್ಣನ್ನು ಪರ್ಸ್ ನಲ್ಲಿಟ್ಟುಕೊಳ್ಳಿ.

ಜನ್ಮ ದಿನಾಂಕ 5, 14, 23 ಆಗಿದ್ದಲ್ಲಿ ಹಸಿರು ಬಣ್ಣದ ಪರ್ಸ್ ಇಟ್ಟುಕೊಳ್ಳಿ. ಹಾಗೆ 5 ರೂಪಾಯಿಯ ಒಂದು ನೋಟು ಹಾಗೂ 10 ರೂಪಾಯಿಯ ಐದು ನೋಟನ್ನು ಹಸಿರು ಕಾಗದದಲ್ಲಿ ಸುತ್ತಿ ಪರ್ಸ್ ನಲ್ಲಿಡಿ.

6, 15, 24 ರ ದಿನಾಂಕದಂದು ಹುಟ್ಟಿದವರು ಹೊಳೆಯುವ ಬಿಳಿ ಬಣ್ಣದ ಪರ್ಸ್ ಬಳಸಿ. ಇದು ನಿಮ್ಮ ಅದೃಷ್ಟ ಬದಲಿಸಲಿದೆ.

ನಿಮ್ಮ ಜನ್ಮ ದಿನಾಂಕ 7, 16, 25 ಆಗಿದ್ದಲ್ಲಿ ಮಲ್ಟಿ ಕಲರ್ ಪರ್ಸ್ ಬಳಸಿ. ಮೀನಿನ ಸ್ಟಿಕ್ಕರ್ ಪರ್ಸ್ ನಲ್ಲಿಟ್ಟುಕೊಳ್ಳಿ.

8, 17 ಮತ್ತು 26 ನೇ ದಿನಾಂಕದಂದು ಜನಿಸಿದವರು ನೀಲಿ ಬಣ್ಣದ ಪರ್ಸ್ ಖರೀದಿ ಮಾಡಿ. ಬಯಸಿದ್ರೆ ನವಿಲುಗರಿಯೊಂದನ್ನು ಪರ್ಸ್ ನಲ್ಲಿಟ್ಟುಕೊಳ್ಳಿ.

9, 18 ಮತ್ತು 27 ನೇ ತಾರೀಕಿನಂದು ಜನಿಸಿದವರು ಗುಲಾಬಿ ಬಣ್ಣದ ಪರ್ಸ್ ಇಟ್ಟುಕೊಳ್ಳಬೇಕು. ಅಶ್ವತ್ಥ ಎಲೆಯನ್ನು ಪರ್ಸ್ ನಲ್ಲಿಟ್ಟುಕೊಂಡರೆ ಲಕ್ಷ್ಮಿ ಕೃಪೆ ತೋರುವುದರಲ್ಲಿ ಎರಡು ಮಾತಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read