ಈ ದಿನಗಳಂದು ಪೀಠೋಪಕರಣ ಖರೀದಿ ಮಾಡಬೇಡಿ

ಮನೆಗೆ ಪೀಠೋಪಕರಣಗಳ ಅವಶ್ಯಕತೆ ಬಹಳ ಇದೆ. ಮನೆಯ ಸೌಂದರ್ಯವನ್ನು ಕೂಡ ಇದು ಹೆಚ್ಚಿಸುತ್ತೆ. ಆದ್ರೆ ಯಾವಾಗ ಬೇಕಾದ್ರೂ ಮನೆಗೆ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ಖರೀದಿ ಮಾಡಲು ದಿನ ನೋಡುವುದು ಉತ್ತಮ.

ಮಂಗಳವಾರ, ಶನಿವಾರ ಮತ್ತು ಅಮವಾಸ್ಯೆಯಂದು ಪೀಠೋಪಕರಣಗಳನ್ನು ಖರೀದಿ ಮಾಡಬಾರದು.

ಶುಭ ಮುಹೂರ್ತ ನೋಡಿ ಪೀಠೋಪಕರಣ ಖರೀದಿ ಮಾಡಬೇಕು.

ಮನೆಯಲ್ಲಿಯೇ ಪೀಠೋಪಕರಣ ಮಾಡಿಸುವುದಾದಲ್ಲಿ ಮುಹೂರ್ತ ನೋಡಿ ಮನೆಗೆ ಹಲಗೆಗಳನ್ನು ತನ್ನಿ.

ಪೀಠೋಪಕರಣ ಖರೀದಿ ಮಾಡುವಾಗ ಅದು ಯಾವ ಮರದಿಂದ ಸಿದ್ಧವಾಗಿದ್ದು ಎಂಬುದನ್ನು ತಿಳಿದುಕೊಳ್ಳಿ. ಕೆಲವೊಂದು ಮರ ಶುಭವಾದ್ರೆ ಮತ್ತೆ ಕೆಲವು ಮರದಿಂದ ಮಾಡಿದ ಪೀಠೋಪಕರಣಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ.

ಆದಷ್ಟು ಮನೆಯ ಮೂಲೆಯಲ್ಲಿ ಪೀಠೋಪಕರಣಗಳನ್ನು ಇಡಬೇಡಿ. ಇದು ಒಳ್ಳೆಯದಲ್ಲ.

ಸ್ಟೀಲ್ ಕುರ್ಚಿ ಬಳಸುವುದು ಲಾಭದಾಯಕ. ಮನೆ ಹಾಗೂ ಕಚೇರಿಯಲ್ಲಿ ಸ್ಟೀಲ್ ಕುರ್ಚಿ ಇಡುವುದರಿಂದ ವ್ಯಾಪಾರದಲ್ಲಿ ಲಾಭವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read