ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ತರಕಾರಿಗಳು ಬಹಳ ಸಹಾಯಕವಾಗಿವೆ. ಮೂಲಂಗಿ, ಕ್ಯಾರೆಟ್ ಮತ್ತು ಬೀಟ್ರೂಟ್ ಸೇರಿದಂತೆ ಅನೇಕ ತರಕಾರಿಗಳನ್ನು ಶೀತ ವಾತಾವರಣದಲ್ಲಿ ಹಸಿಯಾಗಿ ತಿನ್ನಬಹುದು. ಆದರೆ ಕೆಲವು ನಿರ್ದಿಷ್ಟ ಕಾಯಿಲೆಯಿಂದ ಬಳಲುತ್ತಿರುವವರು ಮೂಲಂಗಿಯಿಂದ ದೂರವೇ ಇರಬೇಕು. ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿ ಮಾಡುತ್ತದೆ.
ಚಳಿಗಾಲದಲ್ಲಿ ಮೂಲಂಗಿ ತಿನ್ನುವುದರಿಂದ ದೇಹದೊಳಗೆ ಶಾಖ ಉತ್ಪತ್ತಿಯಾಗುತ್ತದೆ. ಶೀತದಿಂದ ಇದು ನಮ್ಮನ್ನು ದೂರವಿಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳು ಮೂಲಂಗಿಯನ್ನು ಸೇವಿಸಬಾರದು. ಅವರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಚಳಿಗಾಲದಲ್ಲಿ ಕೆಲವರಿಗೆ ಬಾಯಾರಿಕೆ ಕಡಿಮೆ ಇರುತ್ತದೆ. ಈ ಸಮಯದಲ್ಲಿ ಅವರು ಕಡಿಮೆ ನೀರು ಕುಡಿಯುತ್ತಾರೆ. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವವರು ಮೂಲಂಗಿಯಿಂದ ದೂರವಿರಬೇಕು.
ಈ ಸಮಯದಲ್ಲಿ, ಮೂಲಂಗಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಸೋಡಿಯಂ ಸಮತೋಲನ ಏರುಪೇರಾಗುತ್ತದೆ. ಈ ಕಾರಣದಿಂದಾಗಿ ಥೈರಾಯ್ಡ್ ಹಾರ್ಮೋನುಗಳಲ್ಲಿ ಸಹ ಏರುಪೇರು ಕಂಡುಬರುತ್ತದೆ.ಮೂಲಂಗಿಯನ್ನು ಹೆಚ್ಚು ತಿನ್ನುವವರು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಬಿಪಿ ಕಡಿಮೆ ಇರುವವರು ಮೂಲಂಗಿಯನ್ನು ಹೆಚ್ಚು ಸೇವಿಸಿದರೆ ರಕ್ತ ಪೂರೈಕೆಯಲ್ಲಿ ತೊಂದರೆಯಾಗುತ್ತದೆ. ಈ ಕಾರಣದಿಂದಾಗಿ ದೇಹವು ಅನಾರೋಗ್ಯಕ್ಕೆ ತುತ್ತಾಗುತ್ತದೆ.