ಕೂದಲುದುರುವ ಸಮಸ್ಯೆ ಹಲವರಲ್ಲಿ ಕಂಡುಬರುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಆದರೆ ಅತಿ ಮುಖ್ಯವಾದ ಕಾರಣವೇನೆಂದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ. ನಮ್ಮ ದೇಹದಲ್ಲಿ ಈ ಪೋಷಕಾಂಶಗಳು ಕಡಿಮೆಯಾದಾಗ ಕೂದಲುದುರುವ ಸಮಸ್ಯೆ ಕಾಡುತ್ತದೆ. ಹಾಗಾಗಿ ಆ ಪೋಷಕಾಂಶಗಳು ಯಾವುದೆಂದು ತಿಳಿದು ಕೂದಲ ಆರೋಗ್ಯ ಕಾಪಾಡಿಕೊಳ್ಳಿ.
*ಪ್ರೋಟೀನ್ : ಕೂದಲಿನ ಬುಡದಲ್ಲಿ ಪ್ರೋಟೀನ್ ನಿಂದ ಮಾಡಿದ ಕಿರುಚೀಲಗಳಿವೆ. ಹಾಗಾಗಿ ಕೂದಲು ಬೆಳೆಯಲು ಪ್ರೋಟೀನ್ ಬಹಳ ಮುಖ್ಯ . ಪ್ರೋಟೀನ್ ಕೊರತೆಯಾದಾಗ ಕೂದಲು ಉದುರಿ ಹೋಗುತ್ತದೆ. ಹಾಗಾಗಿ ಮೊಟ್ಟೆ, ಮಾಂಸ, ಬೀಜಗಳು, ಸಮುದ್ರ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.
*ವಿಟಮಿನ್ ಬಿ12 : ಕೂದಲು ಬೆಳೆಯಲು ಕೆಂಪು ರಕ್ತ ಕಣಗಳು ಬಹಳ ಮುಖ್ಯ. ವಿಟಮಿನ್ ಬಿ12 ಕೆಂಪು ರಕ್ತ ಕಣಗಳನ್ನು ಉತ್ಪಾದಿಸಿ ಅದರ ಮೂಲಕ ಆಮ್ಲಜನಕವನ್ನು ಕೂದಲಿನ ಬುಡಕ್ಕೆ ಸಾಗಿಸುತ್ತದೆ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಹಾಗಾಗಿ ಮೀನು, ಮಾಂಸ, ಡೈರಿ ಪ್ರೊಡಕ್ಟ್, ಮೊಟ್ಟೆಗಳನ್ನು ಹೆಚ್ಚಾಗಿ ಸೇವಿಸಿ.
*ಕಬ್ಬಿಣಾಂಶ : ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದಾಗ ಕೂದಲುದುರುವ ಸಮಸ್ಯೆ ಕಾಡುತ್ತದೆ. ಕೂದಲ ಬೆಳವಣಿಗೆಗೆ ಬೇಕಾಗುವ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತದ ಕಣಗಳ ಉತ್ಪಾದನೆಗೆ ಕಬ್ಬಿಣಾಂಶ ಬಹಳ ಮುಖ್ಯ. ಹಾಗಾಗಿ ಮಾಂಸ, ಬೀನ್ಸ್, ಹಸಿರು ತರಕಾರಿಗಳು, ಡ್ರೈ ಪ್ರೂಟ್ಸ್, ಮುಂತಾದವುಗಳನ್ನು ಹೆಚ್ಚಾಗಿ ಸೇವಿಸಿ.
*ಸತು : ಇದು ಕೂಡ ಕೂದಲಿನ ಬೆಳವಣೆಗೆಗೆ ಅತಿ ಅವಶ್ಯಕ, ದೇಹದಲ್ಲಿ ಸತುವಿನ ಕೊರತೆ ಉಂಟಾದಾಗ ಕೂದಲುದುರಲು ಶುರುವಾಗುತ್ತದೆ. ಹಾಗಾಗಿ ಮಾಂಸ, ಬೀನ್ಸ್, ಬೀಜಗಳು, ಸಮುದ್ರಾಹಾರ, ಧಾನ್ಯಗಳನ್ನು ಸೇವಿಸಿ.