ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಕಷ್ಟು ಸಂಕಷ್ಟಕ್ಕೊಳಗಾಗುವ ರೈತರಿಗೆ ಉತ್ತಮ ಬೆಳೆ ಬಂದರೂ ನೆಮ್ಮದಿ ಇರುವುದಿಲ್ಲ. ನಿಶ್ಚಿತ ಬೆಲೆ ಇಲ್ಲದೆ ಬೆಳೆಗೆ ಅತ್ಯಂತ ಕಡಿಮೆ ದರ ಸಿಗುವ ಕಾರಣ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅದೇ ಪರಿಸ್ಥಿತಿ ಈಗ ರಾಜ್ಯದ ಈರುಳ್ಳಿ ಬೆಳೆಗಾರರಿಗೆ ಬಂದಿದೆ.
ಈ ಬಾರಿ ರಾಜ್ಯದಲ್ಲಿ ಈರುಳ್ಳಿಯ ಉತ್ತಮ ಇಳುವರಿಯಾಗಿದ್ದು, ಜೊತೆಗೆ ನೆರೆಯ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದರಿಂದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇದರ ಪರಿಣಾಮ ರೈತರು ಅಸಹಾಯಕರಾಗಿ ಆಕಾಶ ನೋಡುವಂತಾಗಿದೆ.
ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 8 ರೂಪಾಯಿಗಳಿದ್ದರೆ ದೊಡ್ಡ ಈರುಳ್ಳಿ 20ರಿಂದ 25 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಈರುಳ್ಳಿ ಬೆಳೆದ ರೈತರಿಗೆ ಪ್ರತಿ ಕೆಜಿಗೆ ಕೇವಲ 5 ರಿಂದ 15 ರೂಪಾಯಿವರೆಗೆ ಸಿಗುವಂತಾಗಿದೆ. ಸಾಗಣೆ ವೆಚ್ಚ ಇವುಗಳೆಲ್ಲವನ್ನು ಪರಿಗಣಿಸಿದರೆ ರೈತರಿಗೆ ಅತ್ಯಲ್ಪ ಪ್ರಮಾಣದಲ್ಲಿ ಹಣ ಸಿಗುತ್ತಿದೆ.