ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಹೊಸ ಇನ್ನೋವಾ ಕ್ರಿಸ್ಟಾದ ಟಾಪ್ ಎರಡು ಗ್ರೇಡ್ ಗಳ (ಝಡ್ ಎಕ್ಸ್ ಮತ್ತು ವಿಎಕ್ಸ್) ಬೆಲೆಯನ್ನು ಪ್ರಕಟಿಸಿದೆ. ಈ ವಾಹನವು ಸುಧಾರಿತ ಮುಂಭಾಗದ ಫ್ಯಾಸಿಯಾದೊಂದಿಗೆ ಲಭ್ಯವಿದೆ.
ಇದನ್ನು ಒರಟಾದ ಮತ್ತು ದೃಢವಾದ ಲುಕ್ ಗಾಗಿ ನಿರ್ದಿಷ್ಟ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಆ ಮೂಲಕ ಭಾರತೀಯ ಕುಟುಂಬಗಳು, ಉದ್ಯಮಿಗಳು ಮತ್ತು ಕಾರ್ಪೊರೇಟ್ ಗಳ ಅಗತ್ಯಗಳನ್ನು ಪೂರೈಸುತ್ತದೆ.
ಐಕಾನಿಕ್ ಎಂಪಿವಿ 2005 ರಲ್ಲಿ ಭಾರತದಲ್ಲಿ ಪರಿಚಯಿಸಿದಾಗಿನಿಂದ ತನ್ನ ವಿಭಾಗದಲ್ಲಿ ಮುಂಚೂಣಿಯಲ್ಲಿದೆ, ಇಲ್ಲಿಯವರೆಗೆ ಒಂದು ಮಿಲಿಯನ್ ಯುನಿಟ್ ಗಳನ್ನು ಮಾರಾಟ ಮಾಡಿದೆ. ಈ ವರ್ಷದ ಆರಂಭದಲ್ಲಿ ಬುಕಿಂಗ್ ಪ್ರಾರಂಭವಾದಾಗಿನಿಂದ ವಾಹನವು ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆದಿದೆ.
ಎಕ್ಸ್ ಷೋರೂಂ ಬೆಲೆ (ಗ್ರೇಡ್ಸ್) ಕೆಳಕಂಡಂತಿವೆ.
ZX ( 7 S ) 25,43,000
VX ( 8 S) 23,84,000
VX ( 7 S ) 23,79,000
VX FLT ( 8 S) 23,84,000
VX FLT (7 S) 23,79,000
* ಎಕ್ಸ್ ಶೋರೂಂ ಬೆಲೆಗಳು ಎಲ್ಲಾ ಗ್ರೇಡ್ ಗಳಿಗೆ ಪ್ಯಾನ್ ಇಂಡಿಯಾಗೆ ಅನ್ವಯವಾಗುತ್ತವೆ, ಪ್ರೀಮಿಯಂ ಬಣ್ಣಗಳಿಗೆ ಹೆಚ್ಚುವರಿ ಪ್ರೀಮಿಯಂ ಅನ್ವಯಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಅತುಲ್ ಸೂದ್ ಅವರು, “ಹೊಸ ಇನ್ನೋವಾ ಕ್ರಿಸ್ಟಾ ಡೀಸೆಲ್ ನ ಮೊದಲ ಎರಡು ಗ್ರೇಡ್ ಗಳ ಬೆಲೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಕಠಿಣ ಮತ್ತು ಒರಟಾದ ಮುಂಭಾಗದ ಫ್ಯಾಸಿಯಾ ಮತ್ತು ಶೈಲಿ, ಆರಾಮ ಮತ್ತು ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣದೊಂದಿಗೆ, ಹೊಸ ಇನ್ನೋವಾ ಕ್ರಿಸ್ಟಾ ಪ್ರಸಿದ್ಧ ಇನ್ನೋವಾ ಪರಂಪರೆಯನ್ನು ಮುಂದುವರಿಸುವುದು ಖಚಿತ. ವಾಹನವು ಪ್ರಯಾಣಿಕರ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸುವ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ನಮ್ಮ ಗ್ರಾಹಕರು ಈ ವಾಹನವು ನೀಡುವ ವರ್ಧಿತ ಚಾಲನಾ ಅನುಭವವನ್ನು ಮೆಚ್ಚುತ್ತಾರೆ ಮತ್ತು ಆನಂದಿಸುತ್ತಾರೆ ಎಂಬ ವಿಶ್ವಾಸವಿದೆ.
ಹೊಸ ಇನ್ನೋವಾ ಕ್ರಿಸ್ಟಾ ರೂ.50,000/-ಕ್ಕೆ ಬುಕಿಂಗ್ ಗೆ ಲಭ್ಯವಿದೆ. ಗ್ರಾಹಕರು ಈಗ www.toyotabharat.com ಡೀಲರ್ ಔಟ್ ಲೆಟ್ ಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ಬುಕ್ ಮಾಡಬಹುದು. ಹೊಸ ಇನ್ನೋವಾ ಕ್ರಿಸ್ಟಾ ಜಿ, ಜಿಎಕ್ಸ್, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ನಾಲ್ಕು ಗ್ರೇಡ್ಗಳಲ್ಲಿ ಮತ್ತು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್-ಗಾರ್ಡೆ ಬ್ರೋನ್ಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಎಂಬ ಐದು ಬಣ್ಣಗಳಲ್ಲಿ ಬುಕಿಂಗ್ಗೆ ಲಭ್ಯವಿದೆ ಎಂದಿದ್ದಾರೆ.