1/2 ಕೆಜಿ – ಕುಂಬಳ ಕಾಯಿ, 3 ಚಮಚ – ತೆಂಗಿನ ಎಣ್ಣೆ, 1/2 ಚಮಚ – ಉದ್ದಿನ ಬೇಳೆ, 2 ಚಮಚ – ಕೊತ್ತಂಬರಿ ಬೀಜ, 1/4 ಚಮಚ – ಜೀರಿಗೆ , ಸ್ವಲ್ಪ ಇಂಗು, 4 – ಬ್ಯಾಡಗಿ ಮೆಣಸಿನಕಾಯಿ, ತೆಂಗಿನಕಾಯಿ ತುರಿ -1/2 ಕಪ್, ಬೆಲ್ಲ – ಸಣ್ಣ ತುಂಡು, ಕರಿಬೇವು – 5 ಎಸಳು, ಹುಣಸೆಹಣ್ಣು – ನೆಲ್ಲಿಕಾಯಿ ಗಾತ್ರದ್ದು (ನೆನಸಿ ರಸ ತೆಗೆದುಕೊಳ್ಳಿ).
ಮಾಡುವ ವಿಧಾನ:
ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಸಾಸಿವೆ ಹಾಕಿ ಇದು ಸಿಡಿದಾಗ ಉದ್ದಿನ ಬೇಳೆ, ಧನಿಯಾ, ಜೀರಿಗೆ, ಮೆಣಸು ಎಲ್ಲವನ್ನು ಒಟ್ಟಿಗೆ ಹಾಕಿ ಹದ ಹುರಿಯಲ್ಲಿ ಇಟ್ಟು ಹುರಿಯಬೇಕು. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ತೆಂಗಿನಕಾಯಿ ತುರಿ ಸೇರಿಸಿ ರುಬ್ಬಿಕೊಳ್ಳಿ.
ನಂತರ ಕುಂಬಳ ಕಾಯಿಯ ಸಿಪ್ಪೆ ತೆಗೆದು ಹೋಳುಗಳನ್ನಾಗಿ ಮಾಡಿಕೊಂಡು ಒಂದು ಬಾಣಲೆಗೆ ಹಾಕಿ. ಇದಕ್ಕೆ ಸ್ವಲ್ಪ ನೀರು, ಸಣ್ಣ ತುಂಡು ಬೆಲ್ಲ, 2 ಎಸಳು ಕರಿಬೇವು, ಸ್ವಲ್ಪ ಉಪ್ಪು, ಹುಣಸೆಹಣ್ಣಿನ ರಸ ಹಾಕಿ ಬೇಯಲು ಇಡಿ. ಇದು ಬೆಂದ ಮೇಲೆ ರುಬ್ಬಿದ ಮಸಾಲೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ 8 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿದರೆ ರುಚಿಯಾದ ಸಾಂಬಾರು ರೆಡಿ.