ಶಿವನನ್ನು ಆರಾಧಿಸುವ ಲಕ್ಷಾಂತರ ಜನರಿದ್ದಾರೆ. ಶಿವನ ಹಲವಾರು ದೇವಸ್ಥಾನಗಳಿವೆ. ಆದರೆ ಇದು ಕೇಳಿರದಂಥ ಒಂದು ದೇವಸ್ಥಾನ. ಇದಕ್ಕೆ ಬಿಜ್ಲಿ ಮಹಾದೇವ್ ದೇವಾಲಯ ಎಂದು ಕರೆಯಲಾಗುತ್ತದೆ.
ಈ ಅದ್ಭುತವಾದ ದೇವಾಲಯ ಹಿಮಾಚಲ ಪ್ರದೇಶದ ಕುಲು ಕಣಿವೆಯಲ್ಲಿರುವ ಬಿಯಾಸ್ ನದಿಯ ದಡದಲ್ಲಿದೆ. ಈ ದೇವಸ್ಥಾನದಲ್ಲಿರುವ ಶಿವಲಿಂಗದ ಮೇಲೆ 12 ವರ್ಷಕ್ಕೆ ಒಮ್ಮೆ ಸಿಡಿಲು ಬೀಳುತ್ತದೆ. ಯಸ್, ಇದು ನಿಜ. ಸಿಡಿಲು ಬೀಳ್ತಾ ಇದ್ದಂತೆ ಶಿವಲಿಂಗವು ತುಂಡುತುಂಡಾಗುತ್ತದೆ.
ಶಿವಲಿಂಗ ಮುರಿದುಹೋದಾಗ, ಇಲ್ಲಿನ ಪೂಜಾರಿ ಛಿದ್ರಗೊಂಡ ಶಿವಲಿಂಗದ ತುಣುಕುಗಳನ್ನು ಸಂಗ್ರಹಿಸಿ ಬೆಣ್ಣೆ ಹಚ್ಚಿ ಸೇರಿಸುತ್ತಾರೆ. ಸ್ವಲ್ಪ ಸಮಯದ ನಂತರ ಶಿವಲಿಂಗ ಮತ್ತೆ ತನ್ನ ಘನ ರೂಪಕ್ಕೆ ತಿರುಗುತ್ತದೆ. ಸಿಡಿಲಿನಿಂದಾಗಿ ಇಡೀ ಹಳ್ಳಿ, ದೇವಸ್ಥಾನ ಹಾನಿಗೊಳಗಾಗುತ್ತೆ. ಆದರೆ ಇಡೀ ಗ್ರಾಮವನ್ನು ಶಿವ ರಕ್ಷಿಸುತ್ತಾನೆ ಎಂಬುದು ಗ್ರಾಮಸ್ಥರ ನಂಬಿಕೆ. ಈ ಅದ್ಬುತವನ್ನು ಹನ್ನೆರಡು ವರ್ಷಗಳಲ್ಲಿ ಒಮ್ಮೆ ಕಾಣಬಹುದು.