ಈ ಬಾರಿಯ 10ನೇ ತರಗತಿಯ ಫಲಿತಾಂಶವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಪ್ರಕಟಿಸಲಾಗುತ್ತಿದ್ದು, ವಿದ್ಯಾರ್ಥಿಗಳು, ಪೋಷಕರು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ SSLC ಫಲಿತಾಂಶ ಮೊದಲು 10 ಗಂಟೆಗೆ ಪ್ರಕಟವಾಗಲಿದ್ದು, ಬಳಿಕ 11ಗಂಟೆಗೆ ಶಾಲೆಗಳಲ್ಲಿ ಪ್ರಕಟ ಮಾಡಲಾಗುತ್ತದೆ.
ವೆಬ್ ಸೈಟ್ ನಲ್ಲಿ ಈ ಫಲಿತಾಂಶವನ್ನು ವೀಕ್ಷಿಸಲು ವಿದ್ಯಾರ್ಥಿಗಳು https://karresults.nic.in ಲಿಂಕ್ ಗೆ ಭೇಟಿ ನೀಡಿ ತಮ್ಮ ಪ್ರವೇಶ ಪತ್ರದಲ್ಲಿರುವ ಹಾಲ್ ಟಿಕೆಟ್ ನಂಬರ್ ಸೇರಿದಂತೆ ಕೆಲ ಮಾಹಿತಿ ನೀಡಬೇಕಾಗುತ್ತದೆ. ಬಳಿಕ ಅಂಕಗಳೊಂದಿಗೆ ಸಂಪೂರ್ಣ ಫಲಿತಾಂಶ ಲಭ್ಯವಾಗುತ್ತದೆ.
ಈ ಬಾರಿ 5,833 ಸರ್ಕಾರಿ ಶಾಲೆ, 3,605 ಅನುದಾನಿತ ಮತ್ತು 6,060 ಅನುದಾನರಹಿತ ಸೇರಿದಂತೆ ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ಪರೀಕ್ಷೆ ನಡೆದಿತ್ತು. ಚುನಾವಣಾ ಕಾರ್ಯದ ನಡುವೆಯೂ ಮೌಲ್ಯಮಾಪನ ನಿಗದಿಯಂತೆ ಪೂರ್ಣಗೊಂಡಿದ್ದು, ಇಂದು ಫಲಿತಾಂಶ ಪ್ರಕಟವಾಗುತ್ತಿದೆ.