ಇಂಥ ʼಮಹಿಳೆʼಯರನ್ನು ಬಯಸುತ್ತಾರಂತೆ ಪುರುಷರು……!

ಬಳ್ಳಿಯಂತೆ ಬಳುಕಬೇಕು, ಸಿಂಹದಂತಹ ಸೊಂಟ ಇರಬೇಕು, ಹೀಗೆ ಏನೇನೋ ಕಲ್ಪನೆಗಳು ಮಹಿಳೆಯರ ಬಗ್ಗೆ ಪುರುಷರಿಗೆ ಇರುತ್ತವೆ. ಸಿನಿಮಾಗಳಲ್ಲಿ ನಾಯಕಿಯರು ಹೆಚ್ಚಾಗಿ ತೆಳ್ಳಗಿನವರಾಗಿರುತ್ತಾರೆ. ದಪ್ಪಗೆ ಮೈಕೈ ತುಂಬಿಕೊಂಡ ಹೆಣ್ಣು ಮಕ್ಕಳ ಬಗ್ಗೆ ಸಿನಿಮಾದಲ್ಲಿರಲಿ, ನಿಜ ಜೀವನದಲ್ಲಿಯೂ ಪುರುಷರು ಇಷ್ಟಪಡಲಾರರು ಎನ್ನುತ್ತದೆ ಅಧ್ಯಯನವೊಂದು.

ಆಧುನಿಕ ಜೀವನ ಶೈಲಿ, ಒತ್ತಡದ ಬದುಕಿನಿಂದ ದೇಹವನ್ನು ಒಂದೇ ರೀತಿಯಲ್ಲಿಟ್ಟುಕೊಳ್ಳುವುದು ಕಷ್ಟವಾಗಿದೆ. ಬೊಜ್ಜು ಸಾಮಾನ್ಯವಾಗಿದೆ. ಅದರಲ್ಲೂ ಗ್ಲಾಮರ್ ಲೋಕದಲ್ಲಂತೂ ಹೆಣ್ಣು ಮಕ್ಕಳು ತೆಳ್ಳಗೆ ಇರಬೇಕು. ಸದಾ ಕಾಲ ಜೀರೋ ಫಿಗರ್ ಮೆಂಟೇನ್ ಮಾಡಬೇಕು ಇಲ್ಲದಿದ್ದರೆ ಬೇಡಿಕೆ ಕುಸಿಯುತ್ತದೆ ಎಂಬ ಆತಂಕ.

ಹಾಗಾಗಿಯೇ ಎಷ್ಟೋ ಮಾಡೆಲ್ ಗಳು ಹೊಟ್ಟೆ ತುಂಬ ಊಟ ಕೂಡ ಮಾಡುವುದಿಲ್ಲ ಎಂಬ ವ್ಯಂಗ್ಯದ ಮಾತುಗಳೂ ಆಗಾಗ ಕೇಳಿಬರುತ್ತವೆ. ಅಷ್ಟಕ್ಕೂ ಇಷ್ಟು ದೊಡ್ಡ ಪೀಠಿಕೆ ಯಾಕೆ ಎಂದಿರಾ? ಅಧ್ಯಯನವೊಂದರ ಪ್ರಕಾರ ತೆಳ್ಳನೆಯ ಬಳ್ಳಿಯಂತೆ ಬಳುಕುವ ದೇಹ ಹೊಂದಿರುವ ಮಹಿಳೆಯರನ್ನು ತಮ್ಮ ಸಂಗಾತಿಯಾಗಿ ಪಡೆಯಲು ಪುರುಷರು ಇಷ್ಟ ಪಡುತ್ತಾರಂತೆ.

ಸಮೀಕ್ಷೆ ಸಂದರ್ಭದಲ್ಲಿ ಪುರುಷರಿಗೆ ದಪ್ಪ, ತೆಳು, ದಢೂತಿ, ಮಧ್ಯಮ, ಸಣ್ಣ ಗಾತ್ರ ಹೀಗೆ ಸುಮಾರು 21 ಬಗೆಯ ಮಹಿಳೆಯರ ಚಿತ್ರಗಳನ್ನು ತೋರಿಸಿ, ತಮ್ಮ ಇಷ್ಟದಂತೆ ಅನುಕ್ರಮವಾಗಿ ಜೋಡಿಸಲು ತಿಳಿಸಲಾಗಿತ್ತು. ಈ ಸಂದರ್ಭದಲ್ಲಿ ಬಹುತೇಕ ಪುರುಷರು ಬಳುಕುವ ಬಳ್ಳಿಯಂತಹ ತೆಳ್ಳನೆಯ ಚಹರೆ ಹೊಂದಿದವರನ್ನು ಹೆಚ್ಚು ಇಷ್ಟಪಟ್ಟಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read