ಜೀವನದಲ್ಲಿ ಸಾಕಷ್ಟು ಕಷ್ಟಗಳು ಬರುತ್ವೆ. ಆದ್ರೆ ಎಲ್ಲ ಕಷ್ಟಗಳನ್ನು ಎದುರಿಸಲು ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಉತ್ತಮ ಆರೋಗ್ಯ ಹಾಗೂ ಆಕಸ್ಮಿಕವಾಗಿ ಬರುವ ದುರ್ಘಟನೆ ಎದುರಿಸಲು ವೈದಿಕ ಶಾಸ್ತ್ರದಲ್ಲಿ ಕೆಲವೊಂದು ವಿಶೇಷ ಪೂಜೆಗಳಿವೆ. ಇದು ಸಾವಿನ ದವಡೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
ಮೃತ್ಯವಿನಿಂದ ನಿಮ್ಮನ್ನು ರಕ್ಷಣೆ ಮಾಡುವ ಪೂಜೆಗಳಲ್ಲಿ ಮಹಾ ಮೃತ್ಯುಂಜಯ ಪೂಜೆ ಕೂಡ ಒಂದು. ಯಾವುದೇ ವ್ಯಕ್ತಿ ಜಾತಕದಲ್ಲಿ ಅಕಾಲ ಮೃತ್ಯುವಿನ ಸಂಕೇತವಿದ್ದರೆ ಮಹಾ ಮೃತ್ಯುಂಜಯ ಪೂಜೆ ಮಾಡಿಸಲಾಗುತ್ತದೆ. ಭಗವಂತ ಶಿವ ಹಾಗೂ ಗಾಯತ್ರಿ ದೇವಿಯನ್ನು ಪೂಜೆ ಮಾಡಲಾಗುತ್ತದೆ. ಮಹಾಮೃತ್ಯಂಜಯ ಪೂಜೆಯನ್ನು 7 ದಿನಗಳ ಕಾಲ ಮಾಡಲಾಗುತ್ತದೆ. ಶಿವನ ಮಂತ್ರವನ್ನು 50 ಲಕ್ಷಕ್ಕೂ ಹೆಚ್ಚು ಬಾರಿ ಜಪಿಸಲಾಗುತ್ತದೆ.
ಮೃತ್ಯುಂಜಯ ಹೋಮವನ್ನು ವಿಧಿ-ವಿಧಾನದ ಮೂಲಕ ಮಾಡಬೇಕು. ಮಂತ್ರವನ್ನು ಸರಿಯಾಗಿ ಜಪಿಸಬೇಕು. ಪೂಜೆಯಲ್ಲಿ ಯಾವುದೇ ತಪ್ಪುಗಳು ಆಗಬಾರದು. ಮೃತ್ಯುಂಜಯ ಹೋಮದ ಬಗ್ಗೆ ತಿಳಿದ ಪಂಡಿತರಿಂದ ಈ ಪೂಜೆ ಮಾಡಿಸುವುದು ಸೂಕ್ತ. ಮಹಾಶಿವರಾತ್ರಿ ಸಂದರ್ಭದಲ್ಲಿ ಮಹಾಮೃತ್ಯಂಜಯ ಪೂಜೆ ಮಾಡಿಸುವುದು ಮಂಗಳಕರ. ಪೂಜೆ ವೇಳೆ ಮಂತ್ರ ಜಪಿಸಲು ರುದ್ರಾಕ್ಷಿ ಮಾಲೆಯನ್ನೇ ಬಳಸಬೇಕು.
ಓಂ ತ್ರಯಂಬಕಮ್ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವಬಂಧನಾನ್ ಮೃತ್ಯೊರ್ಮುಕ್ಷೀಯ ಮಾಂಮೃತಾಥ್
ಈ ಮಂತ್ರವನ್ನು 108 ಬಾರಿ ಜಪಿಸಿ, ಶಿವರಾತ್ರಿ ದಿನ ಶಿವನ ಪೂಜೆ ಮಾಡಿದ್ರೂ ಸಾವು ದೂರವಾಗುತ್ತದೆ. ಮೃತ್ಯುಂಜಯ ಮಂತ್ರವನ್ನು ಸಂಜೀವಿನಿ ಮಂತ್ರವೆಂದೂ ಕರೆಯಲಾಗುತ್ತದೆ.