ಆರೋಗ್ಯಕರ ʼನವಣೆʼ ಅಕ್ಕಿ ವಡೆ ಮಾಡುವ ವಿಧಾನ

ಈಗ ಹೆಚ್ಚಿನವರು ಸಿರಿ ಧಾನ್ಯದತ್ತ ಒಲವು ತೋರಿಸುತ್ತಿದ್ದಾರೆ. ಸಂಜೆ ಸ್ಯ್ನಾಕ್ಸ್ ಗೆ ಬಜ್ಜಿ, ಬೊಂಡಾ ಮಾಡಿಕೊಂಡ ಸವಿಯುತ್ತಾ ಇರುತ್ತೇವೆ. ನವಣೆ ಅಕ್ಕಿ ಬಳಸಿ ಈ ಸ್ನ್ಯಾಕ್ಸ್ ತಯಾರಿಸಿ ನೋಡಿ. ತಿನ್ನುವುದಕ್ಕೆ ರುಚಿಕರವಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು:

ಬೇಯಿಸಿದ ನವಣೆ ಅಕ್ಕಿ – 2 ಕಪ್, 2 ಟೇಬಲ್ ಸ್ಪೂನ್ -ಎಣ್ಣೆ, ಈರುಳ್ಳಿ -1 ಮಧ್ಯಮ ಗಾತ್ರದ್ದು, ಕ್ಯಾರೆಟ್ -1 ಸಣ್ಣಗೆ ಕತ್ತರಿಸಿದ್ದು, ಕ್ಯಾಪ್ಸಿಕಂ -1/2 ಕಪ್ ಸಣ್ಣಗೆ ಕತ್ತರಿಸಿದ್ದು, ಹಸಿಮೆಣಸು-1 ಕತ್ತರಿಸಿದ್ದು, ಚಿಲ್ಲಿ ಪೌಡರ್-1 ಟೀ ಸ್ಪೂನ್, ಟೊಮೆಟೊ ಕೆಚಪ್ -2 ಟೇಬಲ್ ಸ್ಪೂನ್, ಗರಂ ಮಸಾಲ -1 ಟೀ ಸ್ಪೂನ್, ಉಪ್ಪು -ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು -1/2 ಕಪ್.

ಮಾಡುವ ವಿಧಾನ:

1 ಟೀ ಸ್ಪೂನ್ ಎಣ್ಣೆಯನ್ನು ಪ್ಯಾನ್ ಗೆ ಹಾಕಿ ಅದಕ್ಕೆ ಎಲ್ಲಾ ತರಕಾರಿಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಉಪ್ಪು, ಖಾರದಪುಡಿ, ಗರಂ ಮಸಾಲ, ಕೆಚಪ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಬೇಯಿಸಿಟ್ಟುಕೊಂಡ ನವಣೆ ಅಕ್ಕಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ನಂತರ ತಣ್ಣಗಾಗಲು ಬಿಡಿ. ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ವಡೆ ತರಹ ತಟ್ಟಿಕೊಳ್ಳಿ. ಕಾದ ಎಣ್ಣೆಗೆ ಬಿಟ್ಟು ಕರಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read