alex Certify ಆರೋಗ್ಯವರ್ಧಕ ‘ಆಳವಿ ಲಡ್ಡು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯವರ್ಧಕ ‘ಆಳವಿ ಲಡ್ಡು’

ಆಳವಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಕೂದಲು ಉದುರುವಿಕೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಳವಿ ಲಡ್ಡು ಮಕ್ಕಳಿಗೂ ಮಾಡುವುದು ಕೂಡ ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:

¾ ಕಪ್ – ಆಳವಿ, 1 ಟೇಬಲ್ ಸ್ಪೂನ್ – ತುಪ್ಪ, ¼ ಕಪ್ – ರವೆ, ½ ಕಪ್  – ಬೆಲ್ಲದ ಪುಡಿ, 1 ಟೇಬಲ್ ಸ್ಪೂನ್ – ತೆಂಗಿನಕಾಯಿ ತುರಿ, ¼ ಕಪ್ – ಬಾದಾಮಿ ಚೂರುಗಳು.

ಮಾಡುವ ವಿಧಾನ:

ಆಳವಿ ಬೀಜಗಳನ್ನು ½ ಕಪ್ ನೀರಿನಲ್ಲಿ 3 ಗಂಟೆಗಳ ಕಾಲ ನೆನೆಸಿ ನಂತರ ಇದನ್ನು ಸೋಸಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಆಳವಿ ಸೇರಿಸಿ ಇದಕ್ಕೆ ಬೆಲ್ಲ, ರವೆ ಸೇರಿಸಿ 6 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.

ಬೆಲ್ಲ ಕರಗಿ ಎಳೆ ಪಾಕ ಬರುತ್ತಿದ್ದಂತೆ ತೆಂಗಿನಕಾಯಿ ತುರಿ ಬಾದಾಮಿ ಚೂರು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಮಾಡಿ. ನಂತರ ಇದು ತಣ್ಣಗಾದ ಮೇಲೆ ಉಂಡೆ ಕಟ್ಟಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...