ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ..…!

ಮದುವೆ ಸೀಸನ್‌ ಆರಂಭವಾಗಿರುವ ಬೆನ್ನಲ್ಲೇ ಚಿನ್ನದ ಬೆಲೆಯಲ್ಲೂ ಇಳಿಕೆಯಾಗುತ್ತಿದೆ. ಬಂಗಾರ ಖರೀದಿಸಲು ಇದು ಸಕಾಲ ಎನ್ನುತ್ತಾರೆ ತಜ್ಞರು. ಕಳೆದ ದಿನಗಳಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು. ಆದ್ರೀಗ ಚಿನ್ನದ ಬೆಲೆಯಲ್ಲಿ 2300 ರೂಪಾಯಿಗೂ ಹೆಚ್ಚು ಇಳಿಕೆ ದಾಖಲಾಗಿದೆ. ಬೆಳ್ಳಿ ದರ ಸುಮಾರು 4000 ರೂಪಾಯಿ ಇಳಿಕೆಯಾಗಿದೆ. ಬೆಲೆ ಇಳಿಕೆಯಿಂದ ಆಭರಣ ಪ್ರಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಫೆಬ್ರವರಿ 2 ರಂದು ಚಿನ್ನದ ದರ 58,882 ರೂಪಾಯಿಗಳ ದಾಖಲೆಯ ಮಟ್ಟ ತಲುಪಿತ್ತು. ಜನವರಿ 16ರಂದು ಬೆಳ್ಳಿಯ ಬೆಲೆ ದಾಖಲೆಯ 69,167 ರೂಪಾಯಿ ಆಗಿತ್ತು.  

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಏರಿಕೆ

ಚಿನ್ನವು ಬುಲಿಯನ್ ಮಾರುಕಟ್ಟೆಯಲ್ಲಿ ಕುಸಿತವನ್ನು ಕಂಡಿದೆ, ಆದರೆ ಚಿನ್ನ ಮತ್ತು ಬೆಳ್ಳಿ ಎರಡೂ ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಏರಿಕೆ ಕಂಡಿವೆ. 46 ರೂಪಾಯಿಗಳ ಏರಿಕೆಯೊಂದಿಗೆ ಚಿನ್ನದ ದರ 56,172 ರೂಪಾಯಿ ಆಗಿದೆ. ಬೆಳ್ಳಿ ಕೂಡ 152 ರೂಪಾಯಿ ಏರಿಕೆ ಕಂಡು 65,573 ರೂಪಾಯಿಗಳಲ್ಲಿ ವಹಿವಾಟು ನಡೆಸಿತ್ತು.

ಬುಲಿಯನ್ ಮಾರುಕಟ್ಟೆಯಲ್ಲಿ ಮಿಶ್ರ ಪ್ರವೃತ್ತಿ

ಗುರುವಾರ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 56,343 ರೂಪಾಯಿಗೆ ಇಳಿದಿದೆ.ಬೆಳ್ಳಿ ಕೊಂಚ ಏರಿಕೆ ಕಂಡು ಕೆಜಿಗೆ 65,474 ರೂಪಾಯಿ ಆಗಿತ್ತು. ಬುಧವಾರ 10 ಗ್ರಾಂ ಚಿನ್ನ 56, 478 ರೂಪಾಯಿ ಮತ್ತು ಬೆಳ್ಳಿ ಕೆಜಿಗೆ 65,411 ರೂಪಾಯಿ ಆಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read