ಆಧಾರ್ ಜೊತೆ ಪಾನ್ ಸಂಖ್ಯೆಯನ್ನು ಲಿಂಕ್ ಮಾಡಲು 31 ಮಾರ್ಚ್ 2023 ಅಂತಿಮ ದಿನಾಂಕವಾಗಿರುತ್ತದೆ. ಲಿಂಕ್ ಮಾಡಲು 1,000 ರೂಪಾಯಿ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದಲ್ಲದೆ ಹಲವು ಸಮಸ್ಯೆಗಳು ಎದುರಾಗುತ್ತವೆ.
ಈ ಹಿನ್ನೆಲೆಯಲ್ಲಿ ಅತಿ ಸುಲಭವಾಗಿ ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವ ವಿಧಾನ ಇಲ್ಲಿದೆ.
https://www.incometax.gov.in/IEC/foportal ವೆಬ್ಸೈಟ್ ಗೆ ಲಾಗಿನ್ ಆಗಿ.
ಕ್ವಿಕ್ ಲಿಂಕ್ಸ್ ಸೆಕ್ಷನ್ ಅಡಿಯಲ್ಲಿರುವ ಲಿಂಕ್ ಆಧಾರ್ ಕೊಂಡಿಯನ್ನು ಕ್ಲಿಕ್ ಮಾಡಿ.
ನಂತರ ನಿಮ್ಮ ಆಧಾರ್ ಮತ್ತು ಪಾನ್ ಸಂಖ್ಯೆಗಳನ್ನು ನಮೂದಿಸಿ ಮತ್ತು ಸ್ಕ್ರೀನ್ ಮೇಲೆ ಗೋಚರಿಸುವ ಸೂಚನೆಗಳ ಪ್ರಕಾರ ‘ಇ ಪೇ ಟ್ಯಾಕ್ಸ್ ಫಂಕ್ಷನ್ಯಾಲಿಟಿ’ ಮೂಲಕ ರೂ.1000 ರೂಪಾಯಿ ವಿಳಂಬ ಶುಲ್ಕ ಪಾವತಿಸಿ.
ಪಾವತಿ ಪೂರ್ಣಗೊಂಡ ಬಳಿಕ ಪುನಃ ‘ಲಿಂಕ್ ಆಧಾರ್’ ಸೆಕ್ಷನ್ ಗೆ ಪ್ರವೇಶಿಸಿ ಮತ್ತು ನಿಮ್ಮ ಹೆಸರು ಮೊಬೈಲ್ ಸಂಖ್ಯೆ, ಆಧಾರ್ ಮತ್ತು ಪಾನ್ ಸಂಖ್ಯೆಗಳನ್ನು ನಮೂದಿಸಿ.
‘ನನ್ನ ಆಧಾರ್ ವಿವರಗಳು ಸರಿಯಾಗಿವೆ ಎಂದು ಪ್ರಮಾಣಿಕರಿಸುತ್ತಿದ್ದೇನೆ’ ಎಂಬ ಕೊಂಡಿಯನ್ನು ಕ್ಲಿಕ್ ಮಾಡಿ ನೀಡಿರುವ ಮಾಹಿತಿಯನ್ನು ಖಚಿತಪಡಿಸಿ ಮತ್ತು ಲಿಂಕ್ ಆಧಾರ್ ಕೊಂಡಿಯ ಮೇಲೆ ಕ್ಲಿಕ್ ಮಾಡಿರಿ.
ನಿಮ್ಮ ಮೊಬೈಲ್ ನಂಬರ್ ಗೆ ಸಂದಾಯವಾದ ಓಟಿಪಿ ನಮೂದಿಸಿರಿ ಮತ್ತು ಲಿಂಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವ್ಯಾಲಿಡೇಟ್ ಕೊಂಡಿಯ ಮೇಲೆ ಕ್ಲಿಕ್ ಮಾಡಿ.