ಸುಂದರ ತುಟಿಗಳಿಗಾಗಿ ಹುಡುಗಿಯರು ಲಿಪ್ ಸ್ಟಿಕ್ ಹಚ್ಚುತ್ತಾರೆ. ಆದ್ರೆ ಈ ಸೌಂದರ್ಯ ವರ್ದಕ ತುಟಿಗಳ ಬಣ್ಣವನ್ನು ಬದಲಾಯಿಸುತ್ತದೆ. ತುಟಿ ಕಪ್ಪಗಾಗುತ್ತದೆ. ಜೊತೆಗೆ ತುಟಿಗಳು ಬಿರುಕು ಬಿಡಲು ಶುರುವಾಗುತ್ತವೆ. ಇದ್ರಿಂದ ಮುಖದ ಸೌಂದರ್ಯವೂ ಹಾಳಾಗುತ್ತದೆ.
ತುಂಬಾ ಸಮಯ ಧೂಳಿನಲ್ಲಿದ್ದರೂ ತುಟಿಗಳು ಬಣ್ಣ ಕಳೆದುಕೊಳ್ಳುತ್ತವೆ. ಗುಲಾಬಿ ತುಟಿ ಪಡೆಯಲು ಹುಡುಗಿಯರು ಏನೆಲ್ಲ ಕಸರತ್ತು ಮಾಡ್ತಾರೆ. ಅದ್ರ ಬದಲು ಮನೆ ಮದ್ದಿನಿಂದಲೇ ತುಟಿಗಳ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.
ತುಟಿಗಳು ಕಪ್ಪಾಗಿದ್ದರೆ ನಿಂಬೆ ರಸವನ್ನು ಬಳಸಬಹುದು. ರಾತ್ರಿ ಮಲಗುವ ಮೊದಲು ನಿಂಬೆ ಹಣ್ಣನ್ನು ಕಟ್ ಮಾಡಿ ನಿಮ್ಮ ತುಟಿಗೆ ರಬ್ ಮಾಡಿ. ಅನೇಕ ದಿನ ಹೀಗೆ ಮಾಡಿದ್ರೆ ತುಟಿಗಳು ಮತ್ತೆ ಬಣ್ಣ ಪಡೆದು ಸುಂದರವಾಗುತ್ತವೆ.
ಆಲಿವ್ ಆಯಿಲ್ ಗೆ ಸ್ವಲ್ಪ ವ್ಯಾಸಲಿನ್ ಮಿಕ್ಸ್ ಮಾಡಿ. ಇದನ್ನು ರಾತ್ರಿ ಮಲಗುವ ಮೊದಲು ತುಟಿಗಳಿಗೆ ಹಚ್ಚಿಕೊಳ್ಳಿ. ಕೆಲವೇ ದಿನಗಳಲ್ಲಿ ಕಪ್ಪು ತುಟಿ ಮಾಯವಾಗುತ್ತದೆ.
ಗುಲಾಬಿಯಂತ ತುಟಿ ಪಡೆಯಲು ಈ ಉಪಾಯ ಬಹಳ ಒಳ್ಳೆಯದು. ಗುಲಾಬಿ ಎಸಳನ್ನು ತೆಗೆದು ಅದಕ್ಕೆ ಗ್ಲಿಸರಿನ್ ಮಿಕ್ಸ್ ಮಾಡಿ. ಪ್ರತಿ ರಾತ್ರಿ ಮಲಗುವ ಮೊದಲು ಇದನ್ನು ತುಟಿಗಳಿಗೆ ಸವರಿ. ಗುಲಾಬಿ ಎಸಳುಗಳನ್ನು ತುಟಿಗಳಿಗೆ ರಬ್ ಮಾಡುವುದರಿಂದಲೂ ಕಪ್ಪು ಬಣ್ಣ ಮಾಯವಾಗುತ್ತದೆ.
ಹಾಲಿಗೆ ಕೇಸರಿಯನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ತುಟಿಗಳಿಗೆ ಹಚ್ಚಿಕೊಳ್ಳುವುದರಿಂದಲೂ ತುಟಿಗಳ ಮೇಲಿರುವ ಕಪ್ಪು ಬಣ್ಣ ಮಾಯವಾಗಿ ಸುಂದರ ತುಟಿ ನಿಮ್ಮದಾಗುತ್ತದೆ.