ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈನಲ್ಲಿ ಸ್ಮಾರ್ಟ್ಫೋನ್ ಗಳು ಕುಣಿದಾಡ್ತಿವೆ. ಮೂಲೆ ಮೂಲೆಗೆ ಇಂಟರ್ನೆಟ್ ಸೌಲಭ್ಯವಿದೆ. ಇದ್ರಿಂದ ಪೋರ್ನ್ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣ್ತಿದೆ.
ಆದ್ರೆ ಭಾರತದಲ್ಲಿ ಅಶ್ಲೀಲ ವೆಬ್ಸೈಟ್ ಗಳ ಮೇಲೆ ನಿಷೇಧ ಹೇರಿದ್ದರೂ ಕದ್ದು ಮುಚ್ಚಿ ನೋಡುವವರ ಸಂಖ್ಯೆ ಹೆಚ್ಚಿದೆ. ಈ ಪೋರ್ನ್ ಚಿತ್ರಗಳು ಸಂಬಂಧವನ್ನು ಹಾಳು ಮಾಡುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ.
ಅಶ್ಲೀಲ ಚಿತ್ರ ವೀಕ್ಷಣೆ ಮಾಡುವವರು ಕೆಲವೊಂದು ವಿಷ್ಯಗಳನ್ನು ನಂಬುವುದಿಲ್ಲ. ಆದ್ರೆ ಅಧ್ಯಯನವೊಂದರ ಪ್ರಕಾರ, ಅಶ್ಲೀಲ ಚಿತ್ರ ವೀಕ್ಷಣೆ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತದೆಯಂತೆ. ಲೈಂಗಿಕ ಜೀವನದ ಮೇಲೆ ಇದು ಪ್ರಭಾವ ಬೀರುತ್ತದೆ.
ಪೋರ್ನ್ ಚಿತ್ರಗಳನ್ನು ಹೆಚ್ಚು ವೀಕ್ಷಿಸುವ ಪುರುಷರು ಲೈಂಗಿಕ ಜೀವನದಲ್ಲಿ ಸಂತೃಪ್ತಿ ಹೊಂದುವುದಿಲ್ಲ. ಪೋರ್ನ್ ಚಿತ್ರ ವೀಕ್ಷಣೆ ಚಟ ಹೊಂದಿರುವವರು ಪ್ರತಿಯೊಂದು ಕೆಲಸದಲ್ಲೂ ವಿಫಲರಾಗ್ತಾರೆ. ನಾಚಿಕೆ ಕಾರಣಕ್ಕೆ ಜನರು ಕದ್ದುಮುಚ್ಚಿ ಚಿತ್ರ ವೀಕ್ಷಣೆ ಮಾಡ್ತಾರೆ. ಈ ಖಾಸಗಿತನ ಹಾಗೂ ನಾಚಿಕೆ ರಿಯಲ್ ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿ ಮುಂದೆ ತಮ್ಮನ್ನು ತೆರೆದಿಡಲು ಇವರು ಹಿಂದೇಟು ಹಾಕ್ತಾರೆ.
ಪೋರ್ನ್ ಚಿತ್ರ ವೀಕ್ಷಣೆಯನ್ನು ಮದ್ಯಪಾನಕ್ಕೆ ಹೋಲಿಕೆ ಮಾಡಬಹುದು. ಹೆಚ್ಚು ಪೋರ್ನ್ ವೀಕ್ಷಣೆ ಮಾಡುವ ಕೆಲವರು ಲೈಂಗಿಕವಾಗಿ ಆಕ್ರಮಣಕಾರಿಯಾಗಿರುತ್ತಾರೆ. ಈ ಜನರು ಅಪರಾಧ ಮಾಡುವುದು ಹೆಚ್ಚು ಎಂದು ಅನೇಕ ಅಧ್ಯಯನ ಹೇಳಿದೆ.
ಪೋರ್ನ್ ಚಿತ್ರ ವೀಕ್ಷಣೆ ಮಾಡುವ ಜನರು ನಿರಾಶಾವಾದಿಗಳಾಗಿರುತ್ತಾರೆ. ಹಣಕಾಸು,ಉದ್ಯೋಗ ಹಾಗೂ ಸಂಬಂಧಗಳಿಗೆ ಸಂಬಂಧಿಸಿ ಸಮಸ್ಯೆ ಎದುರಿಸುತ್ತಾರೆ.
ಪೋರ್ನ್ ವೀಕ್ಷಣೆಯು ಲೈಂಗಿಕ ಜೀವನದಲ್ಲಿ ಅಶ್ಲೀಲ ಆಲೋಚನೆಗಳು ಮತ್ತು ಅವಾಸ್ತವಿಕ ನಿರೀಕ್ಷೆಗಳನ್ನು ಉತ್ತೇಜಿಸುತ್ತದೆ. ಈ ಕಾರಣದಿಂದಾಗಿ ಮಹಿಳೆಯರ ಬಗ್ಗೆ ಪುರುಷರ ವರ್ತನೆ ನಕಾರಾತ್ಮಕವಾಗಿರುತ್ತದೆ. ಹೆಚ್ಚಿನ ತೃಪ್ತಿಗಾಗಿ ಇವರು ಅಕ್ರಮ ಸಂಬಂಧಗಳ ಮೊರೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಪೋರ್ನ್ ಚಿತ್ರಗಳಲ್ಲಿ ಕಾಂಡೋಮ್ ಬಳಕೆ ಕಡಿಮೆಯಿರುತ್ತದೆ. ಅಲ್ಲಿನ ಕಲಾವಿದರು ನಿಯಮಿತವಾಗಿ ಲೈಂಗಿಕ ರೋಗದ ತಪಾಸಣೆ ನಡೆಸುತ್ತಾರೆ. ಆದ್ರೆ ಈ ಚಿತ್ರಗಳನ್ನು ವೀಕ್ಷಿಸುವ ಜನರು ಕಾಂಡೋಮ್ ನಿಂದ ದೂರವಿರಲು ಬಯಸುತ್ತಾರೆ. ಇದು ಲೈಂಗಿಕ ರೋಗಕ್ಕೆ ದಾರಿಯಾಗುತ್ತದೆ.
ಉತ್ತಮ ಲೈಂಗಿಕ ಜೀವನ ಬಯಸುವವರು ಕಡಿಮೆ ಪೋರ್ನ್ ಚಿತ್ರ ವೀಕ್ಷಣೆ ಮಾಡುವಂತೆ ತಜ್ಞರು ಸಲಹೆ ನೀಡುತ್ತಾರೆ. ಇದು ಸೆಕ್ಸ್ ಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೊಡೆದುಹಾಕಲು ನೆರವಾಗುತ್ತದೆ. ಪೋರ್ನ್ ಚಿತ್ರಗಳು ಸೆಕ್ಸ್ ಗೆ ಸಂಬಂಧಿಸಿದ ಜ್ಞಾನ ವೃದ್ಧಿ ಮಾಡುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ಉತ್ತಮ ಜೀವನ ಮಾರ್ಗ ಆಯ್ಕೆ ಮಾಡುವುದು ಅಂತಿಮವಾಗಿ ನಿಮ್ಮ ಕೈನಲ್ಲಿದೆ.