ದೇಹದ ಅನೇಕ ಸಮಸ್ಯೆಗಳಿಗೆ ವೈದ್ಯರ ಮೊರೆ ಹೋಗುವುದು ಸಾಮಾನ್ಯ. ಹೀಗೆ ಭೇಟಿ ಕೊಟ್ಟಾಗ ವೈದ್ಯರು ನಮ್ಮ ಸಮಸ್ಯೆಗೆ ಪರಿಹಾರವಾಗಿ ಒಂದಷ್ಟು ಮಾತ್ರೆಗಳನ್ನು ಬರೆದುಕೊಟ್ಟಿರುತ್ತಾರೆ.
ಅಂಗಡಿಯಿಂದ ಖರೀದಿಸಿದ ಮಾತ್ರೆಗಳನ್ನ ಸಾಮಾನ್ಯವಾಗಿ ಕೋರ್ಸ್ ಪೂರ್ಣಗೊಳಿಸದೇ ಮಾತ್ರೆಗಳನ್ನು ಉಳಿಸಿಬಿಡುವುದೇ ಹೆಚ್ಚು. ಇಂತಹ ಮಾತ್ರೆಗಳ ಅವಧಿ ಮುಗಿದಿದ್ದರೆ ನೀವೇನು ಮಾಡುತ್ತಿರಿ?
ಅವಧಿ ಮುಗಿದ ಮಾತ್ರೆಗಳ ಸೇವನೆ ಅಪಾಯಕಾರಿ. ಹಾಗಾಗಿ ಕಸದ ಬುಟ್ಟಿಗೆ ಇದನ್ನ ಹಾಕುವುದು ಒಂದೇ ದಾರಿ ಅಂದುಕೊಳ್ಳುವವರಿಗೆ ಇಲ್ಲೊಂದು ಉಪಾಯವಿದೆ. ಮಾತ್ರೆಗಳನ್ನು ಗಿಡಕ್ಕೆ ಹಾಕುವುದು. ಹೌದು, ಅವಧಿ ಮುಗಿದ ಮಾತ್ರೆಗಳನ್ನು ಕಸಕ್ಕೆ ಎಸೆಯುವ ಬದಲು ನಿಮ್ಮ ಮನೆಯ ಕುಂಡದೊಳಕ್ಕೆ ಹಾಕಿ, ಚಮತ್ಕಾರ ನೋಡಿ.
ಆದರೆ ಒಂದು ವಿಷಯ ನೆನಪಿರಲಿ. ಅವಧಿ ಮೀರಿದ ವಿಟಮಿನ್, ಮಿನರಲ್ ಮಾತ್ರೆಗಳಷ್ಟೇ ನೀವು ಕುಂಡದೊಳಗೆ ಹಾಕಲು ಸಾಧ್ಯ. ಯಾವುದೇ ನೋವು ನಿವಾರಕ ಅಥವಾ ನಿರ್ದಿಷ್ಟ ಖಾಯಿಲೆಗೆ ಸೂಚಿಸಿದ ಮಾತ್ರೆಗಳನ್ನು ಬಳಸುವ ಹಾಗಿಲ್ಲ. ವಿಟಮಿನ್ ಹಾಗೂ ಮಿನರಲ್ಸ್ ಯುಕ್ತ ಅವಧಿ ಮೀರಿದ ಮಾತ್ರೆಗಳನ್ನು ಹಾಕುವುದರಿಂದ ಗಿಡಗಳು ಸೊಂಪಾಗಿ ಬೆಳೆದು ನಳನಳಿಸುತ್ತದೆ.