ಶ್ರೀಮಂತರಾಗುವುದು ಪ್ರತಿಯೊಬ್ಬರ ಬಯಕೆ. ಹಗಲಿರುಳು ಕಷ್ಟಪಟ್ಟರೂ ಹಣ ಕೈನಲ್ಲಿ ನಿಲ್ಲುವುದಿಲ್ಲ ಎನ್ನುವವರಿದ್ದಾರೆ.
ಅದೃಷ್ಟದ ಜೊತೆ ದೇವರ ಕೃಪೆ ನಿಮ್ಮ ಮೇಲಿದ್ದರೆ ಮಾತ್ರ ಯಶಸ್ಸು, ಆರ್ಥಿಕ ವೃದ್ಧಿ ಸಾಧ್ಯ.
ಸ್ಥಾನ ಹಾಗೂ ಗೌರವ ಪ್ರಾಪ್ತಿಗಾಗಿ ಪ್ರತಿ ಭಾನುವಾರ ಸೂರ್ಯ ವೃತ ಮಾಡಬೇಕು. ಭಗವಂತ ಸೂರ್ಯನ ನಾಮಸ್ಮರಣೆ ಮಾಡುವವರಿಗೆ ನೌಕರಿಯಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಗೌರವ ಪ್ರಾಪ್ತಿ ಜೊತೆಗೆ ಭಾನುವಾರ ಸೂರ್ಯ ವೃತ ಮಾಡಿ ಉಪವಾಸ ಮಾಡಿದ್ರೆ ಕಣ್ಣಿನ ಹಾಗೂ ಚರ್ಮದ ಖಾಯಿಲೆ ದೂರವಾಗುತ್ತದೆ.
ಶ್ರೀಮಂತರಾಗಲು ಬಯಸಿದ್ದರೆ ಭಾನುವಾರ ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಹಾಲನ್ನು ನಿಮ್ಮ ತಲೆ ಬದಿಯಲ್ಲಿಟ್ಟು ಮಲಗಿ. ಸೋಮವಾರ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಎದ್ದು, ಸ್ನಾನ ಮಾಡಿ ಹಾಲನ್ನು ಅಶ್ವತ್ಥ ಮರದ ಕೆಳಗೆ ಹಾಕಿ. ಸತತ 11 ಭಾನುವಾರಗಳ ಕಾಲ ಇದನ್ನು ಮಾಡಬೇಕು.
ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಬೇಕು ಎಂದಾದ್ರೆ ಭಾನುವಾರ ಕಪ್ಪು ನಾಯಿ, ಕಪ್ಪು ಹಸುವಿಗೆ ಆಹಾರ ನೀಡಿ. ಕಪ್ಪು ಇರುವೆಗೆ ಆಹಾರ ನೀಡಿದ್ರೂ ಶುಭಫಲ ಪ್ರಾಪ್ತಿಯಾಗುತ್ತದೆ.
ಸಂಪತ್ತು, ಸಮೃದ್ಧಿ, ಸುಖ, ಶಾಂತಿ ಬಯಸುವವರು ಭಾನುವಾರ ಸಂಜೆ ಅಶ್ವತ್ಥ ಮರದ ಕೆಳಗೆ ಚೌಮುಖ ದೀಪವನ್ನು ಹಚ್ಚಬೇಕು.