alex Certify ಶುದ್ಧ ಅರಶಿನ ಸೇವನೆಯಿಂದ ದೇಹದಲ್ಲಾಗುತ್ತೆ ಉತ್ತಮ ರಕ್ತಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುದ್ಧ ಅರಶಿನ ಸೇವನೆಯಿಂದ ದೇಹದಲ್ಲಾಗುತ್ತೆ ಉತ್ತಮ ರಕ್ತಸಂಚಾರ

ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಅರಶಿನವನ್ನು ಆಹಾರದ ಮೂಲಕ, ಹಾಲಿನ ಮೂಲಕ ಸೇವಿಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಅವುಗಳು ಯಾವುವೆಂದು ನೋಡೋಣ.

ಶುದ್ಧ ಅರಶಿನ ಸೇವನೆಯಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ. ಅದರಲ್ಲಿರುವ ವಿಷಕಾರಿ ಅಂಶಗಳು ದೇಹದಿಂದ ಹೊರಹೋಗುತ್ತವೆ. ರಕ್ತನಾಳದಲ್ಲಿರುವ ಕೊಬ್ಬನ್ನು ಕರಗಿಸುವ ಅರಶಿಣ ಹೃದಯದ ಸಮಸ್ಯೆಯನ್ನೂ ದೂರ ಮಾಡುತ್ತದೆ.

ಮೈಕೈ ನೋವಾದಾಗ ಬಿಸಿ ನೀರಿಗೆ ಚಿಟಿಕೆ ಅರಶಿನ ಹಾಕಿ ಕುಡಿಯುವುದರಿಂದ ನೋವು ಇಲ್ಲವಾಗುತ್ತದೆ. ಕಿಡ್ನಿ ಸಮಸ್ಯೆಗೂ ಇದು ರಾಮಬಾಣ. ಇದು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.

ಗಾಯವಾದಲ್ಲಿ ಚಿಟಿಕೆ ಅರಶಿನ ಪುಡಿ ಉದುರಿಸುವುದರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ ಮತ್ತು ಗಾಯ ಬಹುಬೇಗ ಗುಣವಾಗುತ್ತದೆ. ಮೆದುಳಿನ ಕಾರ್ಯಗಳನ್ನು ಚುರುಕುಗೊಳಿಸಲು ಇದು ಸಹಕಾರಿ. ಹಲ್ಲಿನ ಕ್ಯಾವಿಟಿ ಸಮಸ್ಯೆ ದೂರ ಮಾಡಲು ಇದರೊಂದಿಗೆ ಚಿಟಿಕೆ ಉಪ್ಪು ಬೆರೆಸಿ ಬಳಸಬಹುದು.

ಮಕ್ಕಳಿಗೆ ರಾತ್ರಿ ಮಲಗುವ ಮುನ್ನ ಕುಡಿಯುವ ಬೆಚ್ಚಗಿನ ಹಾಲಿಗೆ ಚಿಟಿಕೆ ಅರಶಿನ ಪುಡಿ ಉದುರಿಸಿ ಕೊಡಿ. ಪದೇ ಪದೇ ಕಾಡುವ ಶೀತ ಜ್ವರದ ಸಮಸ್ಯೆಯಿಂದ ಶಾಶ್ವತ ಪರಿಹಾರ ಪಡೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...