ಅಪ್ರಾಪ್ತ ಬಾಲಕಿ ಹತ್ಯೆಗೆ ಕಾರಣವಾಯ್ತು ತಾಯಿಯ ‘ಅನೈತಿಕ’ ಸಂಬಂಧ….!

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿ ಹತ್ಯೆಗೆ ತಾಯಿ ಹೊಂದಿದ್ದ ಅನೈತಿಕ ಸಂಬಂಧವೇ ಕಾರಣವಾಗಿದೆ. ತಮ್ಮ ನಡುವಿನ ಸಂಬಂಧದ ಕುರಿತು ಎಲ್ಲರಿಗೆ ಹೇಳಿಬಿಡುತ್ತಾಳೆ ಎಂಬ ಕಾರಣಕ್ಕೆ ತಾಯಿಯ ಪ್ರಿಯಕರನೇ ಉಸಿರುಗಟ್ಟಿಸಿ ಬಾಲಕಿಯನ್ನು ಕೊಲೆಗೈದಿದ್ದಾನೆ.

ಇಂತಹದೊಂದು ಘಟನೆ ಗದಗ ಜಿಲ್ಲೆ, ಮುಂಡರಗಿ ಪಟ್ಟಣದಲ್ಲಿ ನಡೆದಿದ್ದು, ಬಾಲಕಿ ನೆರೆಮನೆಯಲ್ಲಿ ವಾಸ ಮಾಡುತ್ತಿದ್ದ ಮೆಹಬೂಬ್ ಸಾಬ್, ಮಾರ್ಚ್ 6ರಂದು ಹತ್ತನೇ ತರಗತಿ ಪೂರ್ವಸಿದ್ಧತೆ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದ ಬಾಲಕಿಯನ್ನು ಆಕೆಯ ಮನೆಯಲ್ಲಿಯೇ ಕೊಲೆ ಮಾಡಿದ್ದಾನೆ.

ಮೆಹಬೂಬ್ ಸಾಬ್ ಹಾಗೂ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಬಾಲಕಿ ತಾಯಿ ಮಧ್ಯೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದ್ದು, ಇದು ಬಾಲಕಿಯ ಗಮನಕ್ಕೂ ಸಹ ಬಂದಿತ್ತು. ಹೀಗಾಗಿ ತನ್ನ ತಾಯಿ ಬಳಿ ಇದನ್ನು ವಿರೋಧಿಸಿದ್ದಳು ಎನ್ನಲಾಗಿದೆ.

ಆಗ ಬಾಲಕಿ ತಾಯಿ, ಮೆಹಬೂಬ್ ಸಾಬ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದು, ಆದರೆ ಇದಕ್ಕೆ ತಯಾರಿರದ ಆತ ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕಿಯನ್ನೇ ಮುಗಿಸಲು ಮುಂದಾಗಿದ್ದಾನೆ. ಪರೀಕ್ಷೆ ಮುಗಿಸಿ ಮನೆಗೆ ಬಂದ ಬಾಲಕಿ ಕತ್ತು ಹಿಸುಕಿ ಕೊಲೆ ಮಾಡಿದ್ದು, ಪೊಲೀಸರ ವಿಚಾರಣೆ ವೇಳೆ ಸತ್ಯ ಸಂಗತಿ ಬಹಿರಂಗವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read