ಮಹಿಳೆಯರಿಗೆ ದೇಹದಲ್ಲಿ ಅನಗತ್ಯವಾಗಿ ಕಾಣಿಸಿಕೊಳ್ಳುವ ಕೂದಲು ಹಲವು ಸಮಸ್ಯೆಗಳನ್ನು ತಂದೊಡ್ಡೀತು. ಇದರ ನಿವಾರಣೆಗೆ ಸರಳವಾದ ಹಲವು ವಿಧಾನಗಳಿವೆ.
ಮೊದಲನೆಯದಾಗಿ ಶೇವಿಂಗ್. ಇದು ಸುಲಭದಲ್ಲಿ, ಕಡಿಮೆ ವೆಚ್ಚದಲ್ಲಿ ಮಾಡಿಕೊಳ್ಳಬಹುದಾದ ವಿಧಾನವಾಗಿದ್ದರೂ ಕೂದಲು ಅಷ್ಟೇ ವೇಗವಾಗಿ 3-4 ದಿನದಲ್ಲಿ ಮತ್ತೆ ಬೆಳೆಯುತ್ತದೆ.
ಪ್ರಸ್ತುತ ಮಳಿಗೆಗಳಲ್ಲಿ ಸಿಗುವ ಹೇರ್ ರಿಮೂವರ್ ಕ್ರೀಮ್ ಬಳಸಿ ಕೂದಲನ್ನು ತೆಗೆಯಬಹುದು. ಇದರಿಂದ ನೋವಿನ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಕೆಲವರಿಗೆ ಈ ಕ್ರೀಮ್ ಅಲರ್ಜಿ ಉಂಟು ಮಾಡಬಹುದು. ಸಣ್ಣ ಬೊಕ್ಕೆಗಳು, ತುರಿಕೆ ಕಾಣಿಸಿಕೊಂಡೀತು.
ವ್ಯಾಕ್ಸಿಂಗ್ ಹೆಚ್ಚಿನ ಮಂದಿ ಮಾಡಿಕೊಳ್ಳುವ ಹೇರ್ ರಿಮೂವಿಂಗ್ ವಿಧಾನವಾಗಿದ್ದು 2ರಿಂದ 4 ವಾರಗಳ ತನಕ ಮತ್ತೆ ಕೂದಲು ತೆಗೆಯಬೇಕಿಲ್ಲ. ಆದರೆ ಇದಕ್ಕೆ ಹೆಚ್ಚಿನ ಸಮಯ ಬೇಕು.
ಲೇಸರ್ ವಿಧಾನದಲ್ಲೂ ಕೂದಲನ್ನು ತೆಗೆಯಬಹುದಾಗಿದ್ದು ಇದು ಕೂಡಾ ನೋವಿಲ್ಲದೆ ನಡೆಯುತ್ತದೆ. ಬೇಡದ ಕೂದಲಿಗೆ ಈ ಮೂಲಕ ಶಾಶ್ವತ ವಿದಾಯ ಹೇಳಬಹುದು. ಆದರೆ ಇದು ದುಬಾರಿ ಮತ್ತು ಮನೆಯಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲ.