ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು ಯಾವುದು? ಅದಕ್ಕೇನು ಮದ್ದು ಅನ್ನೋದನ್ನು ನೋಡೋಣ.
ಮುಟ್ಟಿನ ನೋವು : ಸ್ತ್ರೀಯರಿಗೆ ಪ್ರತಿ ತಿಂಗಳು ಮುಟ್ಟಿನ ನೋವು ಸಾಮಾನ್ಯ. ಆ ನೋವಿನಿಂದ ಪಾರಾಗಲು ಪ್ರತಿನಿತ್ಯ ತಣ್ಣೀರಿಗೆ 2-3 ನಿಂಬೆಹಣ್ಣಿನ ರಸ ಬೆರೆಸಿ ಕುಡಿಯಿರಿ.
ದೀರ್ಘ ಕಾಲದ ತಲೆನೋವು : ನಿಮಗೆ ಆಗಾಗ ತಲೆನೋವು ಬರ್ತಾ ಇದ್ರೆ ಸೇಬು ಹಣ್ಣಿನ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಅದಕ್ಕೆ ಉಪ್ಪು ಹಾಕಿಕೊಂಡು ಪ್ರತಿದಿನ ಸೇವಿಸಿ.
ವಾಯು (ಗ್ಯಾಸ್ ಟ್ರಬಲ್) : ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಕಾಲು ಚಮಚದಷ್ಟು ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ರಿಲೀಫ್ ಸಿಗುತ್ತದೆ.
ಗಂಟಲು ನೋವು : ಗಂಟಲು ನೋವಿಗೆ ಸುಲಭವಾದ ಮನೆಮದ್ದಿದೆ. 2-3 ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಎಲೆಯ ಅಂಶ ಬಿಟ್ಟುಕೊಂಡ ಬಳಿಕ ಆ ನೀರಿನಿಂದ ಬಾಯಿ ಮುಕ್ಕಳಿಸಿ.
ಬಾಯಿ ಹುಣ್ಣು : ಬಾಳೆಹಣ್ಣು ಮತ್ತು ಜೇನುತುಪ್ಪ ಸೇರಿಸಿ ನುಣ್ಣಗಿನ ಪೇಸ್ಟ್ ಮಾಡಿ. ಅದನ್ನು ಬಾಯಿ ಹುಣ್ಣಿಗೆ ಹಚ್ಚಿದರೆ ನೋವು ಮಾಯವಾಗುತ್ತದೆ.
ಸೈನಸ್ : ಆರ್ಗೆನಿಕ್ ಸೈಡರ್ ವಿನೆಗರ್ ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ ಅರ್ಧ ಕಪ್ ನೀರಿನಲ್ಲಿ ಕುದಿಸಿ, ಅದು ಬಿಸಿಯಾಗಿದ್ದಾಗಲೇ ಕುಡಿಯಿರಿ.
ಅಧಿಕ ರಕ್ತದೊತ್ತಡ : ಪ್ರತಿದಿನ ಬೆಳಿಗ್ಗೆ ಹಾಲಿನೊಂದಿಗೆ ನೆಲ್ಲಿಕಾಯಿ ಸೇವಿಸಿದ್ರೆ ರಕ್ತದೊತ್ತಡ ಕಡಿಮೆಯಾಗುತ್ತದೆ.
ಅಸ್ತಮಾ : ಅಸ್ತಮಾ ಸಮಸ್ಯೆ ಇರುವವರು ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚ ದಾಲ್ಚಿನಿ ಪುಡಿ ಸೇರಿಸಿ ಸೇವಿಸಿ.
ತಲೆಹೊಟ್ಟು : ಇದು ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ತೆಂಗಿನೆಣ್ಣೆಗೆ ಕರ್ಪೂರ ಮಿಶ್ರಣ ಮಾಡಿ ಪ್ರತಿದಿನ ಮಲಗುವ ಮುನ್ನ ತಲೆಗೆ ಹಚ್ಚುತ್ತಾ ಬಂದರೆ ಹೊಟ್ಟು ಮಾಯವಾಗುತ್ತದೆ.
ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು : ನೆಲ್ಲಿಕಾಯಿಯನ್ನು ಒಣಗಿಸಿ ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ. ಅದನ್ನು ತೆಂಗಿನೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ತಲೆಗೆ ಮಾಲೀಶ್ ಮಾಡಿದರೆ ಕೂದಲು ಬೆಳ್ಳಗಾಗುವುದಿಲ್ಲ.
ಕಪ್ಪು ಕಲೆಗಳು (ಡಾರ್ಕ್ ಸರ್ಕಲ್ಸ್) : ಕಣ್ಣುಗಳ ಸುತ್ತ ಮೂಡುವ ಡಾರ್ಕ್ ಸರ್ಕಲ್ ಗಳನ್ನು ತೊಲಗಿಸಲು ಸುಲಭ ಉಪಾಯವಿದೆ. ಗ್ಲಿಸರಿನ್ ಗೆ ಕಿತ್ತಳೆ ರಸ ಮಿಶ್ರಣ ಮಾಡಿ ಕಪ್ಪು ಕಲೆಗಳ ಮೇಲೆ ಹಚ್ಚಿ.