ಅಕ್ಕಿ ಹಿಟ್ಟಿನ ಚಿಪ್ಸ್ ಮಾಡಿ ರುಚಿ ನೋಡಿ

ಮಾರುಕಟ್ಟೆಯಲ್ಲಿ ಸಿಗುವ ಆಹಾರಕ್ಕಿಂತ ಮನೆಯಲ್ಲಿ ಮಾಡಿದ ಆಹಾರಕ್ಕೆ ರುಚಿ ಹೆಚ್ಚು. ನಾವೇ ಮಾಡಿದ ಆಹಾರ ಸೇವನೆ ಒಂದು ರೀತಿಯ ಖುಷಿ ನೀಡುತ್ತದೆ. ನೀವು ಮನೆಯಲ್ಲೇ ಅಕ್ಕಿ ಚಿಪ್ಸ್ ಮಾಡಿ ತಿನ್ನಬಹುದು.

ಅಕ್ಕಿ ಚಿಪ್ಸ್ ಗೆ ಬೇಕಾಗುವ ಪದಾರ್ಥ :

1 ಕಪ್ ಅಕ್ಕಿ ಹಿಟ್ಟು

1 ಕಪ್ ಬಿಸಿ ನೀರು

1 ಟೀ ಚಮಚ ಕೆಂಪು ಮೆಣಸಿನ ಪುಡಿ

1 ಚಮಚ ಚಾಟ್ ಮಸಾಲಾ

1 ಚಮಚ ಕಪ್ಪು ಉಪ್ಪು

1 ಚಮಚ ಬಿಳಿ ಉಪ್ಪು

ಕರಿಯಲು ಎಣ್ಣೆ

ಅಕ್ಕಿ ಚಿಪ್ಸ್ ಮಾಡುವ ವಿಧಾನ :

ಮೊದಲು ಒಂದು ಪಾತ್ರೆಗೆ ನೀರು ಹಾಕಿ ಬಿಸಿ ಮಾಡಿ. ಅದಕ್ಕೆ ಚಿಟಕಿ ಕಲ್ಲುಪ್ಪು ಹಾಕಿ.

ನೀರು ಬಿಸಿಯಾದಾಗ, ಒಂದು ಚಮಚ ಬಿಳಿ ಉಪ್ಪನ್ನು ಸೇರಿಸಿ ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ. ಈಗ ನೀರಿನಲ್ಲಿ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದು ಮಿಕ್ಸ್ ಆದ್ಮೇಲೆ ಗ್ಯಾಸ್ ಬಂದ್ ಮಾಡಿ, ಮಿಶ್ರಣವನ್ನು ಚೆನ್ನಾಗಿ ನಾದಿ. ಹಿಟ್ಟು ನಿಮ್ಮ ಕೈಗೆ ಅಂಟಿಕೊಂಡರೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸೇರಿಸಿ. ನಂತ್ರ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿ 5 ನಿಮಿಷಗಳ ಕಾಲ ಮುಚ್ಚಿಡಿ.

ನಂತ್ರ ರೊಟ್ಟಿಯಂತೆ ತೆಳುವಾಗಿ ಮಾಡಿ, ನಿಮಗೆ ಬೇಕಾದ ಆಕಾರದಲ್ಲಿ ಸಣ್ಣದಾಗಿ ಕತ್ತರಿಸಿ. ಚಿಪ್ಸ್ ಆಕಾರಕ್ಕೆ ಕತ್ತರಿಸಿದ ನಂತ್ರ ಅದಕ್ಕೆ ಸಣ್ಣ ಸಣ್ಣ ರಂಧ್ರ ಮಾಡಿ. ಗ್ಯಾಸ್ ಮೇಲೆ ಎಣ್ಣೆ ಬಿಸಿ ಮಾಡಿ ಇದನ್ನು ಹಾಕಿ ಫ್ರೈ ಮಾಡಿ. ಒಂದೇ ಬಾರಿ ಎಲ್ಲ ಚಿಪ್ಸ್ ಹಾಕಬೇಡಿ. ಹಾಗೆ ದೊಡ್ಡ ಉರಿಯಲ್ಲಿ ಬೇಯಿಸಬೇಡಿ. ಎಲ್ಲಾ ಚಿಪ್ಸ್ ಸಿದ್ಧವಾದ ನಂತ್ರ ಉಪ್ಪು, ಮೆಣಸಿನಕಾಯಿ ಪುಡಿ, ಚಾಟ್ ಮಸಾಲಾ ಮಿಶ್ರಣವನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಿ, ಸರ್ವ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read