ಅಂಟುವಾಳ ಕಾಯಿ ಬಳಸುವುದು ಹೇಗೆ ಗೊತ್ತಾ…?

ಕೂದಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಅತ್ಯುತ್ತಮ ಔಷಧ ಎಂದರೆ ಅಂಟುವಾಳ ಕಾಯಿ. ದಕ್ಷಿಣ ಭಾರತದ ಕಾಡುಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ಹಣ ಗಳಿಸಿಕೊಳ್ಳುವವರೂ ಇದ್ದಾರೆ. ಹಾಗಿದ್ದರೆ ಇದನ್ನು ಬಳಸುವುದು ಹೇಗೆ…?

ಕರ್ನಾಟಕದ ಬಹುತೇಕ ಮನೆಗಳಲ್ಲಿ ಆಭರಣ ತೊಳೆದಿಡಲು ಬಳಸುವ ಅಂಟುವಾಳ ಕಾಯಿಯನ್ನು ಸೌಂದರ್ಯ ವರ್ಧಕ ಕಂಪೆನಿಗಳು ಶ್ಯಾಂಪೂ ಇಲ್ಲವೇ ಸೋಪು ತಯಾರಿಕೆಯಲ್ಲೂ ಬಳಸುತ್ತವೆ.

ಇದರ ನಾಲ್ಕಾರು ಕಾಯಿಯನ್ನು ಜಜ್ಜಿ ಒಂದು ಲೋಟ ನೀರು ಹಾಕಿ ನಿಮ್ಮ ಆಭರಣವನ್ನು ಒಂದು ಗಂಟೆ ಹೊತ್ತು ನೆನೆಯಲು ಹಾಕಿ. ಬಳಿಕ ಮೃದುವಾದ ಬ್ರಶ್ ನಿಂದ ತಿಕ್ಕಿದರೆ ಚಿನ್ನ ಪಳಪಳನೆ ಹೊಳೆಯುತ್ತದೆ.

ಅಂಟುವಾಳದ ಕಾಯಿಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಸ್ನಾನದ ವೇಳೆ ಶ್ಯಾಂಪೂವಿನಂತೆಯೂ ಬಳಸಬಹುದು. ಅಂಗಡಿಗಳಲ್ಲಿ ಸಿಗುವ ಶ್ಯಾಂಪೂಗಳ ಬದಲಿಗೆ ನಿತ್ಯ ಇದನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆ ಹಾಗೂ ತಲೆಹೊಟ್ಟಿಗೆ ಗುಡ್ ಬೈ ಹೇಳಬಹುದು.

ಮುಖ ತೊಳೆಯುವ ಹಾಗೂ ಕೈ ಕಾಲು ತೊಳೆಯುವ ಉದ್ದೇಶದಿಂದಲೂ ಇದನ್ನು ಬಳಸಲಾಗುತ್ತದೆ. ಕೀಟ ಕಚ್ಚಿದ ಉರಿ ಹೋಗಲು ಅಂಟುವಾಳದ ಕಾಯಿಯನ್ನು ತೇದು ಹಚ್ಚಬಹುದು. ವಿಷದ ಪ್ರಭಾವ ಕಡಿಮೆ ಮಾಡಲೂ ಇದನ್ನು ಬಳಸಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read