ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೆ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ. ಲಿವರ್ ಕೂಡಾ ನಮ್ಮ ದೇಹದ ಬಹು ಮುಖ್ಯ ಭಾಗ. ಅದರ ಆರೈಕೆಯ ಬಗ್ಗೆ ತಿಳಿಯೋಣ.
ಐವತ್ತು ಗ್ರಾಂ ನಷ್ಟು ಕಡಲೆ ಕಾಳುಗಳನ್ನು ರಾತ್ರಿ ಹೊತ್ತು ನೆನಸಿ ಬೆಳಿಗ್ಗೆ ನೀರು ಹಾಕಿ ಬೇಯಿಸಿ. ಇದಕ್ಕೆ ಚಿಟಿಕೆಯಷ್ಟು ಕಲ್ಲುಪ್ಪು ಹಾಕಿ. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ತಿನ್ನಿ.
ಹೀಗೆ ಸತತವಾಗಿ ಹದಿನೈದು ದಿನ ಮಾಡಿ. ಹದಿನಾರನೇ ದಿನದಿಂದ ಕಡಲೆಕಾಳನ್ನು ಐವತ್ತು ಗ್ರಾಂ ನಷ್ಟು ತೆಗೆದುಕೊಳ್ಳಿ. ಆದರೆ ಬೇಯಿಸಬಾರದು. ಎಣ್ಣೆಯಲ್ಲಿ ಹಾಕದೆ ಚೆನ್ನಾಗಿ ಹುರಿದುಕೊಳ್ಳಿ. ಚಿಟಿಕೆಯಷ್ಟು ಕಲ್ಲು ಉಪ್ಪನ್ನು ಸೇರಿಸಿ ಸೇವಿಸಿ. ಹದಿನಾರನೇ ದಿನದಿಂದ ಮೂವತ್ತನೆಯ ದಿನದವರೆಗೆ ನಿತ್ಯ ಸೇವಿಸುವುದರಿಂದ ಲಿವರ್ ಸಂಪೂರ್ಣ ಸ್ವಚ್ಛವಾಗುತ್ತದೆ.
ಈ ಅವಧಿಯಲ್ಲಿ ಖಾರ ತಿನ್ನಬಾರದು. ಧೂಮಪಾನ, ಮದ್ಯಪಾನ ಬಿಡಬೇಕು. ದಿನಕ್ಕೆ ನಾಲ್ಕು ಲೀಟರ್ ನಷ್ಟು ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಲಿವರ್ ಶುದ್ಧವಾಗುತ್ತದೆ.